ಧಾರವಾಡ: ಧಾರವಾಡದಲ್ಲಿ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ ಹೇಳಿಕೆ ನೀಡಿದ್ದು, ಹುಬ್ಬಳ್ಳಿ ಚನ್ನಮ್ಮಾ ಮೈದಾನದಲ್ಲಿ ಎಂಐಎಂ ಪಕ್ಷದವರು ಟಿಪ್ಪು ಜಯಂತಿಗಾಗಿ ಅರ್ಜಿ ಕೊಟ್ಟಿದ್ದಾರೆ. ಇನ್ನು ಈ ಕುರಿತು ಮಾತನಾಡಿರುವ ಮುತಾಲಿಕ್ ರವರು, ಇದಕ್ಕೆ ನಾನು ವಿರೋಧಿಸುತ್ತೇನೆ ಹಾಗೂ ಇದಕ್ಕೆ ಅವಕಾಶ ಮಾಡಿ ಕೊಡಬಾರದು. ಪಾಲಿಕೆಯವರು ಅವಕಾಶ ಮಾಡಿ ಕೊಡಬಾರದು ಎಂದು ಶ್ರೀ ರಾಮಸೇನೆಯಿಂದ ಕೂಡಾ ಮನವಿ ಮಾಡುತ್ತೇನೆ. ಅಕಸ್ಮಾತಾಗಿ ಕೊಟ್ಟರೆ ಪ್ರತಿಭಟನೆ ಮಾಡುವ ಎಚ್ಚರಿಕೆ ಕೊಡುತ್ತೇನೆ.
ಇಸ್ಲಾಂನಲ್ಲಿ ಅಲ್ಲಾ ಒಬ್ಬನೇ ಎಂದು ಕುರಾನನಲ್ಲಿ ಹೇಳಲಾಗಿದೆ. ನೂರಕ್ಕೆ 90 ರಷ್ಟು ಮುಸ್ಲಿಮರು ಇದನ್ನೆ ಪಾಲಿಸುತ್ತ ಬಂದಿದ್ದಾರೆ.
ಇನ್ನೊಬ್ಬನ ಪೂಜೆ ಆರಾಧನೆ ಪದ್ಧತಿ ಇಲ್ಲಾ, ಎಂಐಎಂ,ಎಸ್ಡಿಪಿಐಪಿಎಫ್ ಐ ಕಿಡಿಗೆಡಿಗಳು ದ್ವೇಷದ ಭಾವನೆಯಿಂದ ಇದನ್ನ ಮಾಡುತ್ತಿದ್ದಾರೆ. ಟಿಪ್ಪು ಜಯಂತಿ ಸರಿಯಲ್ಲ, ಟಿಪ್ಪುಗೆ ಒಳ್ಳೆತನ ಇರಲಿಲ್ಲಾ. ಮತಾಂತರ ಮಾಡಿದ ವ್ಯಕ್ತಿ ಆತ, ದೇವಸ್ಥಾನ ಕೆಡವಿದ ವ್ಯಕ್ತಿ.
ಸಾವಿರಾರು ಜನರನ್ನು ಕೊಂದಿರುವ ವ್ಯಕ್ತಿ ಹಾಗೂ ಕನ್ನಡ ವಿರೋಧಿ ಆತ. ಇಂತಹ ವ್ಯಕ್ತಿಯ ಜಯಂತಿಯನ್ನ ಚನ್ನಮ್ಮ ಮೈದಾನದಲ್ಲಿ ಆಚರಣೆ ಮಾಡಲು ಬಿಡಲ್ಲ. ನಿಮ್ಮ ನಮಾಜ್ ಧಾರ್ಮಿಕ ಆರಚಣೆ, ವರ್ಷಕ್ಕೆ ಎರಡು ಬಾರಿ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ. ಅದೇ ರೀತಿ ನಮಗೆ ಗಣೇಶೋತ್ಸವ ಮಾಡಲು ಕೊಡಿ ಎಂದು ಹೇಳಿದ್ದೇವೆ. ಒಬ್ಬ ವ್ಯಕ್ತಿಯ ವೈಭವಿಕರಣ ಮಾಡಲು ಬಿಡಲ್ಲ.
ನೀವು ಅಲ್ಲಿ ಟಿಪ್ಪು ಜಯಂತಿ ಮಾಡಿದರೆ ನಾವು ಅಂಬೇಡ್ಕರ್ ಜಯಂತಿ ಮಾಡ್ತೆವೆ. ಛತ್ರಪತಿ ಶಿವಾಜಿ, ಬಸವ ಜಯಂತಿ ಮಾಡ್ತೆವೆ.
ಟಿಪ್ಪು ಜಯಂತಿ ಸಂಘರ್ಷಕ್ಕೆ ಕಾರಣ ಆಗಲಿದೆ, ಅದಕ್ಕೆ ಯಾವುದೇ ಕಾರಣಕ್ಕೆ ಟಿಪ್ಪು ಜಯಂತಿ ಮಾಡಲು ಅವಕಾಶ ಮಾಡಿ ಕೊಡಬಾರದು ಎಂದು ಹೇಳಿದ್ದಾರೆ.