ಮುಂಬೈ: ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಇಂದು 30 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಸ್ಪೋಟಕ ಬ್ಯಾಟ್ಸಮನ್ ಕೆ.ಎಲ್ ರಾಹುಲ್ ತನ್ನ ಗರ್ಲ್ ಫ್ರೇಂಡ್ ಅಥಿಯಾಗೆ ಶುಭಾಶಯ ಕೋರಿದ್ದಾರೆ.
ಅಥಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಇದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದು, ಹಾಗಾಗ ಈ ಜೋಡಿ ಬೇರೆ ಬೇರೆ ದೇಶಗಳಲ್ಲಿ ಕಾಣಿಸಿಕೊಳ್ಳುವ ತಮ್ಮ ಪೊಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಇಂದು ಅಥಿಯಾ ಹುಟ್ಟು ಹಬ್ಬ ಹಿನ್ನಲೆಯಲ್ಲಿ ಕೆಎಲ್ ರಾಹುಲ್ ಬರ್ತಡೇ ಗೆ ವಿಶ್ ಮಾಡಿ, ನನ್ನ ಪ್ರೀತಿಯ ಎಂದು ಲವ್ ಚಿಹ್ನೆ ಇಮೋಜ್ ಹಾಕಿ ಜನ್ಮದಿನದ ಶುಭಾಶಯಗಳು ಕೋರಿದ್ದಾರೆ. ಅಲ್ಲದೇ, ನೀವು ಎಲ್ಲವನ್ನೂ ಉತ್ತಮಗೊಳಿಸುತ್ತೀರಿ ಎಂದು ಇಬ್ಬರು ಜತೆಗೆ ಇರುವ ಕ್ಯೂಟ್ ಪೊಟೋ ಅಪ್ಲೋಡ್ ಮಾಡಿ ಟ್ವೀಟ್ ಮಾಡಿದ್ದಾರೆ.
ಇತ್ತೀಚಿಗಷ್ಟೇ ಕೆ.ಎಲ್ ರಾಹುಲ್ ಜರ್ಮನಿಯಲ್ಲಿ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ರಾಹುಲ್ ಪ್ರೇಯಸಿ ಅಥಿಯಾ ಶೆಟ್ಟಿ ಖುದ್ದು ಮುಂದೆ ನಿಂತು ರಾಹುಲ್ ಆರೈಕೆ ಮಾಡಿದ್ದರು.