Tuesday, November 5, 2024

ಮಾಜಿ ಟಿವಿ ಆ್ಯಂಕರ್​ ಗುಜರಾತ್​ ಸಿಎಂ ಅಭ್ಯರ್ಥಿ ಎಂದು ಘೋಷಿಸಿದ ಆಮ್​ ಆದ್ಮಿ

ನವದೆಹಲಿ: ಗುಜರಾತ್‌ಗೆ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಜಿ ಟಿವಿ ಆ್ಯಂಕರ್​​ ಸುದನ್ ಗಧ್ವಿ ಎಂದು ಅರವಿಂದ್ ಕೇಜ್ರಿವಾಲ್ ಇಂದು ಘೋಷಿಸಿದರು.

ಗುಜರಾತ್​ನಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವನ್ನ ಮಣಿಸಲು ನಾನಾ ರೀತಿಯಲ್ಲಿ ಅರವಿಂದ್​ ಕೇಜ್ರಿವಾಲ್​ ಪ್ಲಾನ್​ ಹಣೆಯುತ್ತಿದ್ದು, ಈಗ ಮಾಜಿ ಪತ್ರಕರ್ತನನ್ನ ಗುಜರಾತ್​ ಎಎಪಿ ಪಾರ್ಟಿಯ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದರು.

ಮಾಜಿ ಪತ್ರಕರ್ತ ಮತ್ತು ಟಿವಿ ನಿರೂಪಕ ಇಸುದನ್ ಗಧ್ವಿ ಅವರು ಗುಜರಾತ್ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಕುರಿತು ಎಎಪಿ ಸಮೀಕ್ಷೆಯಲ್ಲಿ ಶೇಕಡಾ 73 ರಷ್ಟು ಮತಗಳನ್ನುಗಳಿಸಿದ್ದಾರೆ. ಎಎಪಿ ಫೋನ್ ಮೂಲಕ ನಿಮ್ಮ ಮುಂದಿನ ಸಿಎಂ ಅಭ್ಯರ್ಥಿಯಾರಗಬೇಕು ಎಂದು ಜನರು ಕರೆ ಮಾಡಲು ಮತ್ತು ಅವರ ಆಯ್ಕೆಯನ್ನು ಎಎಪಿ ಮುಕ್ತವಾಗಿ ಅವಕಾಶ ನೀಡಿತ್ತು.

ಈ ಬೆನ್ನಲೆಯಲ್ಲಿ ಕೇಜ್ರಿವಾಲ್​ ಅವರು ಸುದನ್ ಗಧ್ವಿ ಅವರನ್ನ ಗುಜರಾತ್​ ಎಎಪಿ ಸಿಎಂ ಎಂದು ಘೋಷಣೆ ಮಾಡಿದ್ದಾರೆ. ಇದೇ ರೀತಿಯ ಸಮೀಕ್ಷೆಯ ನಂತರ ಎಎಪಿ ಪಕ್ಷವು ಪಂಜಾಬ್‌ನಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಭಗವಂತ್ ಸಿಂಗ್ ಮಾನ್ ಅವರನ್ನು ಆಯ್ಕೆ ಮಾಡಿತ್ತು.

40 ವರ್ಷದ ಇಸುದನ್ ಗಧ್ವಿ ಕಳೆದ ವರ್ಷ ಜೂನ್‌ನಲ್ಲಿ ಎಎಪಿ ಸೇರಿದ್ದರು. ಅವರು ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಮೊದಲು ಗುಜರಾತ್‌ನಲ್ಲಿ ಹೆಚ್ಚು ಜನರು ವಿಕ್ಷೀಸುವ ಟಿವಿ ಸುದ್ದಿ ವಾಹಿನಿಗಳಲ್ಲಿ ಆ್ಯಂಕರ್​ ಆಗಿ ಕೆಲಸ ನಿರ್ವಹಿಸಿದ್ದರು.

RELATED ARTICLES

Related Articles

TRENDING ARTICLES