Saturday, November 23, 2024

ಮೊದಲ ದಿನವೇ ಕೃಷಿ ವಿವಿಗೆ ಹರಿದು ಬಂತು ಜನಸಾಗರ

ಬೆಂಗಳೂರು : ದೇಶದ ಬೆನ್ನೆಲುಬು ನಮ್ಮ ರೈತರು. ಅನ್ನದಾತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳವನ್ನು ಆಯೋಜಿಸ್ತಾ ಬಂದಿದೆ. ಇದರಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ಸ್ಥಳೀಯ ಉದ್ದಿಮೆದಾರರು, ಪ್ರಗತಿಪರ ಕೃಷಿಕರು ಸೇರಿದಂತೆ ಸುಮಾರು 720 ಮಳಿಗೆಗಳಿಗೆಗಳಿವೆ. ಇವುಗಳಲ್ಲಿ ರೈತರಿಗೆ ಅತ್ಯವಶ್ಯಕವಾಗಿರುವ ಮಾಹಿತಿ ಲಭ್ಯವಾಗಲಿದೆ.

ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿವೆ ಕರಿಕೋಳಿಗಳು..? – ಮೊದಲ ದಿನವೇ ಕೃಷಿ ವಿವಿಗೆ ಹರಿದು ಬಂತು ಜನಸಾಗರ – ರೈತರಿಗೆ ಅತ್ಯವಶ್ಯಕವಾಗಿರುವ ಮಾಹಿತಿ ಲಭ್ಯ

ಪ್ರತೀ ವರ್ಷದಂತೆ ಈ ವರ್ಷವೂ ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳವನ್ನು ಆಯೋಜಿಸಿದೆ. ಮೇಳಕ್ಕೆ ರಾಜ್ಯಪಾಲ ತಾವರ್ ಚಂದ್ರ ಗೆಹಲೋಟ್ ಚಾಲನೆ ನೀಡಿದ್ರು. ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರನ್ನೂ ಸನ್ಮಾನಿಸಿದ್ರು. ಕೃಷಿ ವಿಶ್ವವಿದ್ಯಾಲಯ ಸಂಶೋಧನೆ ಮಾಡಿರುವ ಭತ್ತ, ತೊಗರಿ, ಅವರೇ ಹೀಗೆ, ಮತ್ತಿತರ ಏಳು ತಳಿಗಳನ್ನೂ ಬಿಡುಗಡೆ ಮಾಡಿದ್ರು.

ಇನ್ನು ಕೃಷಿ ಮೇಳದಲ್ಲಿದ್ದ ದೇಶಿ ಕೋಳಿ ತಳಿಗಳು ಎಲ್ಲರನ್ನೂ ಆಕರ್ಷಿಸ್ತಾ ಇದ್ವು. ಇನ್ನು ಈ ಬಾರಿಯ ಮೇಳದಲ್ಲಿ ಹಸು, ಎತ್ತು ಎಮ್ಮೆಗಳ ಪ್ರದರ್ಶನ ಇರಲಿಲ್ಲ. ಸಾಗಾಣಿಕೆ ವೇಳೆ ರೋಗ ಬರುತ್ತೆ ಅಂತ ಮೇಳಕ್ಕೆ ಜಾನುವಾರನ್ನು ನಿಷೇಧಿಸಿದ್ರು .

ಇನ್ನು ಗುರುವಾರ ಮಳೆಯ ನಡುವೆಯೇ ಶಾಲಾ ಮಕ್ಕಳು, 10 ಜಿಲ್ಲೆಗಳ ರೈತರು ಮೇಳಕ್ಕೆ ವಿಸಿಟ್ ಕೊಟ್ರು. ಮಳೆಯಿಂದಾಗಿ GKVk ರಸ್ತೆಗಳು ಅಧ್ವಾನ ಆಗಿದ್ದವು. ಈ ನಡುವೆ ರೈತರು ಮೇಳದಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಸರಿಯಾಗಿ ಮಾಡಿಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದರು.

ನೀವು ಸಾಮಾನ್ಯವಾಗಿ ಕಂದು ಹಾಗೂ ಬಿಳಿ ಬಣ್ಣದ ಕೋಳಿಗಳನ್ನು ನೋಡಿರಬಹುದು ಅಲ್ವಾ. ಆದ್ರೆ ಮೇಳದಲ್ಲಿ ಕಡಕನಾಥ್ ಕಪ್ಪು ಕೋಳಿಗಳು ಇವೆ. ಇವು ಸಂಪೂರ್ಣ ಕಪ್ಪು ಬಣ್ಣ, ನೋಡಿದ್ರೆ ಇದ್ಯಾವ ದೇಶದ ತಳಿಗಳಪ್ಪ ಅನಿಸುತ್ತೆ. ಆದ್ರೆ ಇವು ಛತ್ತೀಸ್‌ಘಡ ತಲಿಗಳು. ಆದರೆ ಇತ್ತೀಚೆಗೆ ಕರ್ನಾಟಕದಲ್ಲೂ ಕಡಕನಾಥ್ ಕೋಳಿ ಸಾಕಾಣಿಕೆ ನಡೀತಾ ಇದೆ. ಇವು ಮಾಮೂಲಿ ಕೋಳಿಗಳಿಗಿಂತ ಹೆಚ್ಚು ಪೌಷ್ಠಿಕಾಂಶದಿಂದ ಇವೆಯಂತೆ.ಇನ್ನು ಬೆಂಗಳೂರು ಮೂಲದ ಉದ್ದ ಕಿವಿ ಇರುವ ಮೇಕೆಗಳು ಎಂಟ್ರಿ ಕೊಟ್ಟಿದ್ದವು. ಇವುಗಳ ಬೆಲೆ 4 ರಿಂದ 8 ಲಕ್ಷ ರೂಪಾಯಿ ಇತ್ತು .

ಇನ್ನು ಈಸ್ಟ್, ವೆಸ್ಟ್ ಕಂಪೆನಿಯ ಬೆಳೆ ಪ್ರಾತ್ಯಕ್ಷಿಕೆ ಪ್ರದೇಶ ಹೆಚ್ಚು ಜನರನ್ನ ಆಕರ್ಷಿಸ್ತಾ ಇದೆ. ಇಲ್ಲಿ ತರಕಾರಿಗಳಿಗಳನ್ನು ತುಂಬಿರೋ ಚಕ್ಕಡಿ ಎಲ್ಲರನ್ನು ಆಕರ್ಷಿಸ್ತಾ ಇದೆ. ಸುಮಾರು 28 ವಿವಿಧ ತರಕಾರಿ ಬೆಳೆಗಳ ಸುಮಾರು 72 ತಳಿಗಳನ್ನು ಮೇಳದ ಆವರಣದಲ್ಲೇ ಬೆಳೆದು ತೋರಿಸಲಾಗಿದೆ. ಅಲ್ಲೇ ಬೆಳೆದಿರುವ ದಷ್ಟು-ಪುಷ್ಟವಾದ ತರಕಾರಿಗಳನ್ನು ತುಂಬಿರೋ ಚಕ್ಕಡಿ ಎಲ್ಲರನ್ನೂ ಆಕರ್ಷಿಸ್ತಾ ಇದೆ.

ಒಟ್ನಲ್ಲಿ ಸಿಲಿಕಾನ್ ಸಿಟಿಯಲ್ಲಿ ನಡೀತಾ ಇರೋ ಕೃಷಿ ಮೇಳದಲ್ಲಿ ಅನ್ನದಾತರಿಗೆ ಉಪಯೋಗವಾಗುವಂತಹ ಮಾಹಿತಿಯ ಕಣಜವೇ ಇದೆ. ಇನ್ನೂ ಮೂರು ದಿನ ಈ ಮೇಳ ನಡೆಯಲಿದೆ.

ಸ್ವಾತಿ ಪುಲಗಂಟಿ ಮೆಟ್ರೊ ಬ್ಯೂರೊ, ಪವರ್ ಟಿವಿ.

RELATED ARTICLES

Related Articles

TRENDING ARTICLES