ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯಿಂದ ಮಹಾ ಎಡವಟ್ಟು ಮಾಡಿದೆ. ಟೆಂಡರ್ ಹೆಸರಲ್ಲಿ ದಲಿತರಿಗೆ ಅವಮಾನವಾಗಿದೆ. ಧಾರ್ಮಿಕ ದತ್ತಿ ಇಲಾಖೆ ಟೆಂಡರ್ ನಲ್ಲಿ ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡದ ಜನಾಂಗಕ್ಕೆ ಅನ್ಯಾಯ.
ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾಗಿರು ಧಾರ್ಮಿಕ ದತ್ತಿ ಇಲಾಖೆ ಟೆಂಡರ್ ನಲ್ಲಿ ಜಾತಿ ಅಧಾರಿತ ಟೆಂಡರ್ ಬಿಡ್.ಟೆಂಡರ್ ಕರೆಯೋದ್ರಲ್ಲಿ ಜಾತಿ ವ್ಯಾಮೋಹ. ಧಾರ್ಮಿಕ ಇಲಾಖೆಯಲ್ಲೂ ಜಾತಿ ಲೆಕ್ಕಾಚಾರ.ಟೆಂಡರ್ ಪಡೀಬೇಕು ಅಂದ್ರೆ ಮೇಲ್ಜಾತಿಯ ಆಗಿರಬೇಕು. ದೇಗುಲದ ಟೆಂಡರ್ಗೂ ಬಂತು ಜಾತಿ ವ್ಯವಸ್ಥೆ.
ಇತಿಹಾಸ ಪ್ರಸಿದ್ಧ ದೊಡ್ಡ ಗಣೇಶ ದೇವಾಲಯದ ಹಲವು ಟೆಂಡರ್ ಗಳಲ್ಲಿ ಜಾತಿಗೆ ಆಧ್ಯತೆ. ಧಾರ್ಮಿಕ ದತ್ತಿ ಇಲಾಖೆ ಕರೆದಿರೋ ಟೆಂಡರ್ ಪ್ರಕಟಣೆಯಲ್ಲಿ ಜಾತಿ ವ್ಯವಸ್ಥೆ. ವಿಶ್ವವಿಖ್ಯಾತ ಬುಲ್ ಟೆಂಪಲ್ ದೇವಾಲಯದಲ್ಲಿ ಜಾತಿ ಪದ್ದತಿ ಜೀವಂತ.ದೊಡ್ಡ ಗಣೇಶ ದೇವಸ್ಥಾನದ ಪೂಜೆ ಸಮಾಗ್ರಿಗಳ ಮಾರಾಟದ ಟೆಂಡರ್ಗಳ ವಿವರ. ದೇವರ ಪೂಜಾ ಸಾಮಾಗ್ರಿಗಳ ಮಾರಾಟ…(ಬಾಳೆಹಣ್ಣು.. ತೆಂಗಿನಕಾಯಿ.. ಹೂ..ಎಲೆಅಡಿಕೆ..ನಿಂಬೆಹಣ್ಣು.. ಉದ್ದಗಡ್ಡಿ..ಕರ್ಪೂರ..), ಈಡುಗಾಯಿ ಆಯುವ ಹಕ್ಕಿನ ಟೆಂಡರ್, ಎಳನೀರು ಮಾರಾಟ ಟೆಂಡರ್, ಸುಂಕ ವಸೂಲಿ ಟೆಂಡರ್ ಹಾಗೂ ಇವುಗಳು ಮಾತ್ರ ಸಾಮಾನ್ಯ ವರ್ಗಕ್ಕೆ ಮೀಸಲು.
ದೇವಸ್ಥಾನದ ಚಪ್ಪಲಿ ಕಾಯುವ ಹಕ್ಕಿನ ಟೆಂಡರ್ ಮಾತ್ರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗಕ್ಕೆ. ವಿಘ್ನ ವಿನಾಯಕನ ದೇವಸ್ಥಾನ ದಲ್ಲಿ ಅಸ್ವೃಶ್ಯತೆ ಅಚರಣೆ. ದಲಿತರಿಗೆ ಇಲ್ವ ದೇವಾಲಯದ ಇತರೆ ಟೆಂಡರ್ ಭಾಗ್ಯ ಎಂಬ ಪ್ರಶ್ನೆಮೂಡಿದೆ.