ಬೆಂಗಳೂರು: ಈ ಬಾರಿ ಸಸ್ಯ ಕಾಶಿ ಲಾಲ್ ಬಾಗ್ ನಲ್ಲಿ ಪ್ಲವರ್ ಶೋ ನಡೆಯೋದು ಡೌಟು ಆಗಿದೆ. ಲಾಲ್ ಬಾಗ್ ನಲ್ಲಿರೋ ದಿ ನರ್ಸರಿ ಮೆನ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ರಿನಿವಲ್ ಮಾಡದೆ ಕಾಲಹರಣ ಹಿನ್ನೆಲೆ ಈ ಪ್ರಶ್ನೆ ಉದ್ಬವವಾಗಿದೆ.
ಕಳೆದ ಒಂದೂವರೆ ವರ್ಷದಿಂದ ರಿನಿವಲ್ ಮಾಡದೆ ಮೀನಮೇಷ ಎಣಿಸುತ್ತಿರುವ ತೋಟಗಾರಿಕ ಇಲಾಖೆ ನಡೆಗೆ ನರ್ಸರಿ ಮೆನ್ಗಳ ಅಸಮಧಾನ. ದಾಖಲೆಗಳು ಸರಿಯಾಗಿದ್ದರೂ ನವೀಕರಿಸಲು ಅಧಿಕಾರಿಗಳು ಹಿಂದೇಟಾಗಿದ್ದಾರೆ. ಅಕ್ಟೋಬರ್ 21 ರಂದು ಸೊಸೈಟಿಯಿಂದ ಕಾರ್ಯಚಟುವಟಿಕೆ ಸ್ಥಗಿತಕ್ಕೆ ಸೂಚನೆ. ತೋಟಗಾರಿಕೆ ಇಲಾಖೆ ಆ ಒಂದು ಆದೇಶ ಫಲಪುಷ್ಪ ಪ್ರದರ್ಶನಕ್ಕೆ ಎಫೆಕ್ಟ್ ಆದಂತಿದೆ.
ಯಾವುದೇ ಫ್ಲವರ್ ಶೋ ನಡೆಸಬೇಕೆಂದೆರೆ, ಕನಿಷ್ಠ ಮೂರು ತಿಂಗಳಿನಿಂದ ಪ್ರಿಪರೇಷನ್ ನಡೆಸಬೇಕು. ಫ್ಲವರ್ ಶೋ ಅಗತ್ಯವಿರೋ ಸಸಿಗಳನ್ನ ನೀಡುವ ಜವಾಬ್ದಾರಿ ದಿ ನರ್ಸರಿ ಮೆನ್ ಕೋ ಆಪರೇಟಿವ್ ಸೊಸೈಟಿಯದ್ದು. ಏಕಾಏಕಿ ಸೊಸೈಟಿಗೆ ಬೀಗ ಜಡಿದಿದ್ದರಿಂದ ಪೋಷಣೆ ಇಲ್ಲದೆ ಒಣಗಿರೋ ಸಸಿಗಳು. ಲಾಲ್ ಬಾಗ್ ನಲ್ಲಿರೋ ದಿ ನರ್ಸರಿ ಮೆನ್ ಕೋ ಆಪರೇಟಿವ್ ಸೊಸೈಟಿ,ತಕ್ಷಣ ಸೊಸೈಟಿ ಓಪನ್ ಮಾಡುವಂತೆ ಆದೇಶ ಇದ್ದರೂ ಅಧಿಕಾರಿಗಳ ಬೇಜವಾಬ್ದಾರಿ.