ಹಾಸನ: ಹಾಸನದಲ್ಲಿ ಆನೆ ದಾಳಿಗೊಳಗಾಗಿ ವ್ಯಕ್ತಿ ನಿಧನ ಹಿನ್ನೆಲೆ, ಜೆಡಿಎಸ್ ಶಾಸಕರಿಂದ ಪ್ರತಿಭಟನೆ. ವಿಧಾನಸೌಧದ ಗಾಂಧಿ ಪತ್ರಿಮೆ ಎದುರು ಪ್ರತಿಭಟನೆ. ಆನೆ ದಾಳಿ ನಿಯಂತ್ರಿಸಲು ಸರ್ಕಾರ ಕ್ರಮಗೊಳ್ಳುವಂತೆ ಜೆಡಿಎಸ್ ನಾಯಕರಿಂದ ಒತ್ತಾಯ.
ಆದಷ್ಟು ಬೇಗಾ ಆನೆ ಕಾರಿಡಾರ್ ನಿರ್ಮಾಣ ಮಾಡುವಂತೆ ಪ್ರತಿಭಟನೆ. ನಿಧನ ಹೊಂದಿದ ವ್ಯಕ್ತಿಗೆ ಪರಿಹಾರ ನೀಡುವಂತೆ ಒತ್ತಾಯ
ಪ್ರತಿಭಟನೆಯಲ್ಲಿ ಶಾಸಕ ಎಟಿ ರಾಮಸ್ವಾಮಿ ಹಾಗೂ ಹೆಚ್.ಕೆ ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಈ ಕುರಿತು ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ಹೇಳಿಕೆ ನೀಡಿದ್ದಾರೆ. ನಿರಂತರವಾಗಿ ಮನುಷ್ಯರ ಮೇಲೆ ಆನೆ ದಾಳಿ ಆಗುತ್ತಿದೆ
ಜೊತೆಗೆ ನಿನ್ನೆ ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ. ನಾವು ಸರ್ಕಾರದ ಮೇಲೆ ಒತ್ತಡ ಹಾಕಿದ್ದೇವೆ. ಆದರೆ ಸರ್ಕಾರ ಏನೂ ಮಾಡುತ್ತಿಲ್ಲ. ಪರಿಹಾರ ಧನವನ್ನು ಹೆಚ್ಚಿಸುವಂತೆ ನಾವು ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಭರವಸೆ ಕೊಟ್ಟಿದ್ದ ಸರ್ಕಾರ ಹಾಗೆ ಮಾಡಿಲ್ಲ. ಇನ್ನು ಕ್ಷೇತ್ರದಲ್ಲಿ ಜನರು ನಮ್ಮನ್ನು ಪ್ರಶ್ನಿಸುತ್ತಾರೆ. ಮಳೆಯಲ್ಲಿಯೇ ಧರಣಿ ಮಾಡುತ್ತಿರುವ ಜೆಡಿಎಸ್ ಶಾಸಕರು.
ವಿಧಾನಸೌಧದ ಗಾಂಧಿ ಪ್ರತಿಮೆ ಎದರು ಪ್ರತಿಭಟನೆ. ಛತ್ರಿ ಹಿಡಿದು ಕೊಂಡು ಪ್ರತಿಬಟನೆ ಮಾಡುತ್ತಿರುವ ಶಾಸಕರು. ಸುರಿಯುತ್ತಿರುವ ಮಳೆಯುಂದಾಗಿ ವಿಕಾಸಸೌಧದ ಮೆಟ್ಟಿಲುಗಳ ಮೇಲೆ ಕುಳಿತು ಪ್ರತಿಭೆಟನೆ. ಪ್ರತಿಭಟನೆ ಮುಂದುವರೆಸಿದ ಜೆಡಿಎಸ್ ಶಾಸಕರಾದ ಎಟಿ ರಾಮಸ್ವಾಮಿ, ಲಿಂಗೇಶ್, ಎಚ್ ಕೆ ಕುಮಾರಸ್ವಾಮಿ ಭಾಗವಯಿಸಿದ್ದರು.