ಚಾಮರಾಜನಗರ:ಚಾಮರಾಜನಗರ ತಾಲ್ಲೂಕಿನ ಹರನದಹಳ್ಳಿ ಹೋಬಳಿಯ ಚೆನ್ನಪ್ಪನಪುರ ಹಾಗೂ ಅಮಚವಾಡಿ ಗುಡ್ಡದ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಸ್ವಾಮಿಯ ತೇರು ಮುರಿದು ಬಿದ್ದ ಆತಂಕಕಾರಿ ಘಟನೆ ಇಂದು ನಡೆದಿದೆ.
ಕರೋನಾ ಹಿನ್ನಲೆ ಕಳೆದ ಎರಡು ವರ್ಷಗಳಿಂದ ನಿಂತ್ತಿದ್ದ ಜಾತ್ರೆ ಮಹೋತ್ಸವ ಇಂದು ನಡೆಯುತ್ತಿತ್ತು, ಎರಡು ವರ್ಷಗಳ ಬಳಿಕ ನಡೆಯುತ್ತಿದ್ದ ಜಾತ್ರೆಯಲ್ಲಿ ದೇವಾಲಯದ ಅರ್ಧ ಸುತ್ತು ಪೂರ್ಣಗೊಳಿಸಿದ ಬಳಿಕ ಏಕಾಏಕಿ ರಥದ ಮೇಲ್ಭಾಗ, ಮುರಿದು ಬಿದ್ದು ಚಕ್ರಗಳು ಪಲ್ಟಿಯಾಗಿದೆ. 800ಕ್ಕೂ ಹೆಚ್ಚು ಭಕ್ತರು ರಥದ ಸುತ್ತ ಇದ್ದರು ಎಂದು ತಿಳಿದುಬಂದಿದ್ದು, ಅದೃಷ್ಟವಶಾತ್ ಎಲ್ಲರೂ ಪಾರಾಗಿದ್ದಾರೆ.
ರಥದ ಮೇಲೆ ಸಾಕಷ್ಟು ಜನ ಹತ್ತಿದ್ದರೂ ಎನ್ನಲಾಗಿದ್ದು, ತೇರು ಬೀಳುವ ಸಮಯದಲ್ಲಿ ದೇವಸ್ಥಾನದ ಗೋಪುರ ಅಡ್ಡವಿದ್ದ ಕಾರಣ ನಿದನವಾಗಿ ಬಿದ್ದ ಕಾರಣ ಅದೃಷ್ಟವಶಾತ್ ರಥದ ಕೆಳಗೆ ಇದ್ದವರಿಗೆ ಯಾವುದೇ ಪ್ರಾಣಪಾಯದೇ ಹೆಚ್ಚಿನ ಅನಾವುತ ತಪ್ಪಿದಂತ್ತಾಗಿದೆ.