ಧಾರವಾಡ:ರಾಜ್ಯದೆಲ್ಲೆಡೆ ಕಬ್ಬು ಬೆಳೆಗೆ ಉತ್ತಮಬೆಲೆ ನೀಡುವಂತೆ ಆಗ್ರಯಿಸಿ ಕಬ್ಬು ಬೆಳೆಗಾರರು ಆಗ್ರಹ ಮಾಡಿದ್ದಾರೆ. ಇನ್ನು ಧಾರವಾಡದಲ್ಲಿ ಕಬ್ಬು ಬೆಳೆಗಾರರ ಧರಣಿ ಸ್ಥಳಕ್ಕೆ ಉಸ್ತುವಾರಿ ಸಚಿವ ಭೇಟಿ ನಿಡಿದ್ದಾರೆ. ಭೇಟಿ ನಂತರ ಸಚಿವ ಆಚಾರ ಹಾಲಪ್ಪಾ ಹೇಳಿಕೆ ನೀಡಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಮುನೇನಕೊಪ್ಪ ಅವರು ಕನ್ನಡ ರಾಜ್ಯೋತ್ಸವ ಇರುವ ಹಿನ್ನೆಲೆ ರಾಯಚೂರಿಗೆ ಹೋಗಿದ್ದಾರೆ.
ಹೀಗಾಗಿ ಅನಾನುಕೂಲತೆ ಇರುವುದರಿಂದ ಕಬ್ಬು ಬೆಳೆಗಾರರ ಧರಣಿ ಸ್ಥಳಕ್ಕೆ ಬಂದಿಲ್ಲ. ಬಂದು ಭೇಟಿ ಮಾಡ್ತಾರೆ, ಧರಣಿ ಮಾಡುವವರಿಗೆ ಭೇಟಿ ಮಾಡುವುದು ಸರ್ಕಾರದ ಜವಾಬ್ದಾರಿ.ಆ ಜವಾಬ್ದಾರಿ ಎಲ್ಲ ಸಚಿವರು ಮಾಡುತ್ತಾರೆ.
ಕಬ್ಬು ಬೆಳೆಗಾರರು ಎಫ್ಆರ್ಪಿ ಬಗ್ಗೆ ಮನವಿ ಮಾಡಿದ್ದಾರೆ, ಎಲ್ಲ ಶಾಸಕ ಸಚಿವರು ಸಿಎಂಗೆ ಭೇಟಿ ಮಾಡಿ ಎಲ್ಲ ಬೇಡಿಕೆ ಬಗ್ಗೆ ಚರ್ಚೆ ಮಾಡುತ್ತೇವೆ. ಹೇಗೆ ಸಮಸ್ಯೆ ಬಗೆಹರಿಸಬೇಕು ಎಂದು ತೀರ್ಮಾನ ಮಾಡುತ್ತೇವೆ. ಜಿಲ್ಲಾ ಉಸ್ತುವಾರಿಯಾಗಿ ನಾನು ಧರಣಿ ಮಾಡುವವರಿಗೆ ಭೇಟಿ ಮಾಡಿದ್ದೇನೆ. ಧರಣಿ ವಾಪಸ್ ಪಡೆಯಲು ಮನವಿ ಮಾಡಿದ್ದೆನೆ, ಅವರು ಧರಣಿ ವಾಪಸ್ ಪಡೆಯಬಹುದು ಎಂದು ಆಶಾಭಾವನೆಯಿದೆ. ಬೇಡಿಕೆ ಇದ್ದಾಗ ಸಭೆ ಮಾಡಲಾಗುತ್ತೆ, ಎಲ್ಲವೂ ಸಮನ್ವಯ ಆಗಬೇಕು, ಚರ್ಚೆ ಪೂರ್ಣ ಆಗಿಲ್ಲ, ಹೀಗಾಗಿ ಅದರ ನಿರ್ಧಾರ ಹೊರಗೆ ಬಂದಿಲ್ಲ.ಆದಷ್ಟು ಬೇಗ ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಪರಿಹಾರ ಹುಡುಕುತ್ತೇವೆ.
ಎಲ್ಲರೂ ಊಹಾಪೋಹಗಳು ಮಾತನಾಡಿದರೆ ನಾನು ಏನು ಮಾಡಲಿ, ಸಿಎಂ ಯಾವುದೇ ತಲೆಯಲ್ಲಿ ಇಟ್ಟುಕೊಂಡು ಆಡಳಿತ ಮಾಡುತ್ತಿಲ್ಲ. ರೈತರ ಪರ ಇರುವ ಸಿಎಂ ಅವರು ಪಂಜಾಬ್ ಗುಜರಾತ್ ನಲ್ಲಿ ಕಬ್ಬಿನ ಬಾಕಿ 5 ಸಾವಿರ ಕೋಟಿ ಇದೆ, ಕರ್ನಾಟಕದಲ್ಲಿ ಯಾವುದೇ ಬಾಕಿ ಇಲ್ಲಾ. ಅಲ್ಪಸ್ವಲ್ಪ ಎಲ್ಲಾದರೂ ಇರಬೇಕು,ಕೊಡಬೇಕಾದ ಹಣ ಕೊಡಲೇ ಬೇಕು. ಎನೂ ಹಿಂದೆ ಮುಂದೆ ಇಲ್ಲಾ , ನಮ್ಮವರು ಇರಲಿ, ಮನೆಯವರು ಇರಲಿ, ನಾವು ಕೊಡದೇ ಇದ್ದರೆ ಹೇಗೆ. ರೈತರಿಂದ ಕಬ್ಬು ತೆಗೆದುಕೊಂಡು, ಅವರಿಗೆ ಹಣ ಕೊಡಬೇಕಾಗಿದ್ದು ನಮ್ಮ ಧರ್ಮ ಎಮದು ಹೇಳಿದ್ದಾರೆ.