ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕನ್ನಡ ರಾಜ್ಯೋತ್ಸವ ದಿನದಿಂದ ಬಿಎಂಆರ್ಸಿಎಲ್(ಬೆಂಗಳೂರು ಮೆಟ್ರೋ ಮಂಡಳಿ) ಗುಡ್ನ್ಯೂಸ್ ನೀಡಿದೆ.
ನಾಳೆ(ನವೆಂಬರ್ 1) ಯಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪುಯಾಣಿಕರಿಗೆ ಗುಡ್ನ್ಯೂಸ್ ನೀಡಿ ಹೆಚ್ಚುವರಿ ಅನುಕೂಲಗಳನ್ನು ಕಲ್ಪಿಸಲಾಗುತ್ತಿದೆ. ಈ ದಿನದಿಂದ ಸ್ಮಾರ್ಟ್ ಫೋನ್ ಹೊಂದಿರುವ ಮೆಟ್ರೋ ಪಯಾಣಿಕರು ಟೋಕನ್ ಖರೀದಿಸಲು ಟಿಕೆಟ್ ಕೌಂಟರ್ಗಳ ಮುಂದೆ ನಿಲ್ಲುವ ಅಗತ್ಯವಿರುವುದಿಲ್ಲ. ಮೊಬೈಲ್ ಇದ್ದರೆ ಸಾಕು ಎಂದಿದೆ.
ಇನ್ಮುಂದೆ ಮೆಟ್ರೋ ಪ್ರಯಾಣಿಕರು ಮೊಬೈಲ್ ಮೂಲಕ ಕ್ಯೂಆರ್ ಕೋಡ್ ಬಳಸಿ ಟಿಕೆಟ್ ಪಡೆಯಬಹುದು ಎಂದು ನಮ್ಮ ಮೆಟ್ರೋ ಮಂಡಳಿ ಹೇಳಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ಕ್ಯೂಆರ್ ಕೋಡ್ ಮೂಲಕ ಟಿಕೆಟ್ಗಳನ್ನು ಆನ್ಲೈನ್ ಮೂಲಕ ಖರೀದಿಸಲು ಅವಕಾಶ ನೀಡಿದೆ.
ಇನ್ನು ಟಿಕೆಟ್ ಕ್ಯೂಆರ್ ಟಿಕೆಟ್ಗಳನ್ನು ಖರೀದಿಸಲು ಪ್ರಯಾಣಿಕರು ಆಂಡ್ರಾಯ್ಡ್ ಪೋನ್ ಮುಖಾಂತರ ನಮ್ಮ ಮೆಟ್ರೋ ಆ್ಯಪ್ನ್ನ ಪ್ಲೇ ಸ್ಕೋರ್ನಿಂದ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನೋಂದಾಯಿಸಿಕೊಳ್ಳಬೇಕು.
ವಾಟ್ಸ್ ಆಪ್ (ಅಪ್ಲಿಕೇಶನ್)
ಅಧಿಕೃತ ಬಿಎಂಆರ್ಸಿಎಲ್ ನ ವಾಟ್ಸಾಪ್ ಚಾಟ್ ಬಾಟ್ ಮೊಬೈಲ್ ಸಂಖ್ಯೆ 8105556617 ಅನ್ನು ಮೊಬೈಲ್ ನಲ್ಲಿ ಸೇವ್ ಮಾಡಿ “ಹಾಯ್” ಎಂಬ ಸಂದೇಶವನ್ನು, ಕಳುಹಿಸುವ ಮೂಲಕ OF ಟಿಕೆಟ್ಗಳನ್ನು ಖರೀದಿಸಲು ಚಾಟ್ಬಾಟ್ ನೊಂದಿಗೆ ಸಂವಹನವನ್ನು ಪ್ರಾರಂಭಿಸಬಹುದು. ಆಂಡ್ರಾಯ್ಡ್ ಮತ್ತು ಐಫೋನ್ ಮೊಬೈಲ್ ಬಳಕೆದಾರರಿಗೆ ಚಾಟ್ಬಾಟ್ (Chatbot) ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಲಭ್ಯವಿದೆ.
ವಾಟ್ಸಪ್ (WhatsApp) ಚಾಟ್ಬಾಟ್ (chatbot) ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳು:
- ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಂವಾದ ಮಾಡುವ ಆಯ್ಕೆಗಳು
- ಕ್ಯೂಆರ್ ಕೋಡ್ ಟಿಕೆಟ್ಗಳ ಖರೀದಿ
- ಮೆಟ್ರೋ ಸ್ಮಾರ್ಟ್ ಕಾರ್ಡ್ ಗಳ ರೀಚಾರ್ಜ್
- ಜರ್ನಿ ಪ್ಲಾನರ್
ಪ್ರಸ್ತುತ ವುಯಾಣಿಕರ ಸ್ಥಳದ ಹತ್ತಿರವಿರುವ ಮೆಟ್ರೋ ನಿಲ್ದಾಣದ ಮಾಹಿತಿ, ವಿವಿಧ ನಿಲ್ದಾಣಗಳಲ್ಲಿ ರೈಲು ಹೊರಡುವ ಸಮಯದ ಮಾಹಿತಿ, ಯಾವುದೇ ಎರಡು ನಿಲ್ದಾಣಗಳ ನಡುವಿನ ದರದ ಮಾಹಿತಿ
- ಗ್ರಾಹಕರ ಪ್ರತಿಕ್ರಿಯೆ