ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆಯೆ ದಿನೆ ದಿನೇ ಆರೋಫ-ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಇನ್ನು ಈ ಕುರಿತು ಬಿಜೆಪಿ ಸರ್ಕಾರದ ವಿರುದ್ದ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ರಾಜ್ಯದಲ್ಲಿ 40% ಭ್ರಷ್ಟಾಚಾರ ತಾಂಡವವಾಡುತ್ತಿದೆ. ದಿನೇ ದಿನೇ ಸಾಕ್ಷಿಗಳು ಹೊರ ಬರುತ್ತಿದೆ. ಒಂದಲ್ಲ ಒಂದು ವಿಚಾರ ಬಹಿರಂಗವಾಗುತ್ತಿವೆ. ಇನ್ನು ಸರ್ಕಾರದ ಬಗ್ಗೆ ನೊಂದ ಜನರು,ಶಾಸಕರು, ಸಚಿವರು, ಬಿಜೆಪಿ ಕಾರ್ಯಕರ್ತರು ಇವರ ಕರ್ಮಕಾಂಡದ ಬಗ್ಗೆ ಬಾಯಿ ಬಿಡುತ್ತಿದ್ದಾರೆ.
ಇನ್ನು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಇನ್ಸ್ಪೆಕ್ಟರ್ ನಂದೀಶ್ ರವರ ಬಗ್ಗೆ ಎಲ್ಲರಿಗು ನೊವುಮಟಾಗಿದೆ. ಇದು ಹೃದಯಾಘಾತ ಅಲ್ಲ ಸರ್ಕಾರ ಮಾಡಿದ ಕೊಲೆ ಎಂದು ನೇರವಾಗಿ ಸರ್ಕಾರದ ವಿರುದ್ದ ಆರೋಪ ಮಾಡಿದ್ದಾರೆ. ಈಗಾಗಲೇ ಸಚಿವ ಎಂಟಿಬಿ ನಾಗರಾಜ್ ಕೂಡ ಹೇಳಿದ್ದಾರೆ. 70-80 ಲಕ್ಷ ಕೊಟ್ಟು ವರ್ಗಾವಣೆ ಆಗುತ್ತಾರೆ ಅಂತ. ಅಷ್ಟು ಹಣ ಎಲ್ಲಿಂದ ಹೊಂದಿಸಬೇಕು ಅಂತ ಸಚಿವರು ಹೇಳಿದ್ದಾರೆ. ಇಂತಹ ಅನೇಕ ಸಾಕ್ಷಿಗಳು ಹೊರಗೆ ಬರುತ್ತಿವೆ. ಈಗಾಗಲೇ ಬಸವರಾಜ್ ಅಮರಗೋಳ ಪತ್ರ ಬರೆದಿದ್ದಾರೆ. 30% ಕಮಿಷನ್ ಗೆ ಬೇಡಿಕೆ ಇಟ್ಟಿದ್ದಾರೆ ಅಂತ ಪತ್ರ ಬರೆದಿದ್ದಾರೆ.
ಈ ಭ್ರಷ್ಟಾಚಾರ ಹಣ ಯಾರಿಗೆ ತಲುಪಿತು ಅದು ಹೊರಗೆ ಬರಬೇಕು. ಸಚಿವರೇ ನೋವು ಹೇಳಿಕೊಂಡಿದ್ದಾರೆ, ಯಾರೂ ಕೂಡ ಇಲ್ಲ ಅನ್ನುತ್ತಿಲ್ಲ. ಸಿಎಂ,ಗೃಹ ಸಚಿವ ಇಲ್ಲ ಎಂಟಿಬಿ ಯಾರಾದರೂ ಜವಾಬ್ದಾರಿ ಹೊರಬೇಕು. ಮೂವರಲ್ಲಿ ಒಬ್ಬರು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.