ಧಾರವಾಡ: ಧಾರವಾಡದಲ್ಲಿ ಪ್ರಖರ ಹಿಂದುತ್ವವಾದಿ ಪ್ರಮೋದ್ ಮುತಾಲಿಕ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯ ರಾಜಕಾರಣಕ್ಕೆ ಪ್ರಮೋದ್ ಮುತಾಲಿಕ್ ಎಂಟ್ರಿ ಕೊಡ್ತಾರ ಎಂಬ ಗೊಂದಲಕ್ಕೆ, ಕೊನೆಗು ಉತ್ತರ ಸಿಕ್ಕಿದೆ.
ಧಾರವಾಡದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದು, ಬಿಜೆಪಿ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಚುನಾವಣೆ ವರ್ಷದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದ ಪ್ರಮೋದ್ ಮುತಾಲಿಕ್ ರವರು, 2023 ರ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆಗೆ ನಿರ್ಧಾರ ಪ್ರಕಟ ಮಾಡಿದ್ದಾರೆ. ಬೆಳಗಾವಿ, ಬಾಗಲಕೋಟೆ, ಮಂಗಳೂರು, ಉಡುಪಿ ಜಿಲ್ಲೆಯಿಂದ ಸ್ಪರ್ಧೆಗೆ ನಿರ್ಧಾರ ಮಾಡಿದ್ದು, ಬೆಳಗಾವಿ ನಗರದ ಎರಡು ಕ್ಷೇತ್ರ, ಬಾಗಲಕೋಟಯ ತೇರದಾಳ, ಜಮಖಂಡಿ, ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ, ಪುತ್ತೂರು, ಉಡುಪಿಯ ಶೃಂಗೇರಿಯಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.
2023 ರ ಚುನಾವಣೆಯಲ್ಲಿ ಸ್ಪರ್ಧಿಸುವದು ಖಚಿತ ಎಂದ ಮುತಾಲಿಕ್ ರವರು, 2014 ರಿಂದ ಬಿಜೆಪಿ ತನಗೆ ಟಿಕೇಟ ಕೊಡತ್ತೆ ಎಂದು ಭಾವಿಸಿದ್ದೆ.ಬಿಜೆಪಿ ಪಕ್ಷವನ್ನು ಕಟ್ಟಿದವನು ನಾನು, ಬಿಜೆಪಿ ನನಗೆ ನಿರಂತರ ತೊಂದರೆ ಕೊಟ್ಟಿದೆ. ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಂದ ಈ ತೀರ್ಮಾನಕ್ಕೆ ಬಂದಿದ್ದೇನೆ. ನಾನು ಕಟ್ಟ ಹಿಂದುತ್ವವಾದಿ, ಚುನಾವಣೆಯಲ್ಲಿ ಗೆದ್ದರೆ, ನಾನು ಹಿಂದುತ್ವ ಹೊಂದಿದ ಬಿಜೆಪಿಗೆ ಬೆಂಬಲಿಸುತ್ತೇನೆ. ಬಿಜೆಪಿಗೆ ಹಿಂದುತ್ವ ಬೇಕಾಗಿಲ್ಲ, ಬಿಜೆಪಿ ನಮ್ಮನ್ನು ಅವಮಾನಿಸಿದೆ. ತೊಂದರೆ ಕೊಟ್ಟಿದೆ.
ಬಿಜೆಪಿಯಲ್ಲಿ ಸಧ್ಯ ಕಾಂಗ್ರೆಸ್ಸಿಗರೆ ತುಂಬಿದ್ದಾರೆ.
ಹಿಂದುತ್ವದ ಹಿನ್ನೆಲೆ ಹೊಂದಿದವರಿಗೆ ಬಿಜೆಪಿಯಲ್ಲಿ ಮರ್ಯಾದೆ ಇಲ್ಲಾ, ಹೊಸ ಪಕ್ಷ ಮಾಡುವ ಗೋಜಿಗೆ ಹೋಗಲ್ಲ. ಸ್ವತಂತ್ರವಾಗಿ ಸ್ಪರ್ಧಿಸಲು ಹಿಂದು ಕಾರ್ಯಕರ್ತರು ನಿರ್ಧರಿಸಿದ್ದಾರೆ. ಕಾಂಗ್ರೇಸ್ ಹಾಗೂ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲಾ. ಡಿಸೆಂಬರ್ ಮೊದಲ ವಾರದಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಅನ್ನೋದನ್ನ ಪ್ರಕಟ ಮಾಡುತ್ತೇನೆ. ಬಿಜೆಪಿ ನನ್ನನ್ನು ಮನವೊಲಿಸಲು ಬಂದರು ನಾನಂತೂ ಅಲ್ಲಿಗೆ ಹೋಗುವ ಪ್ರಶ್ನೆಯೇ ಇಲ್ಲ. ಎಂದು ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.