Friday, November 22, 2024

ಗುಮ್ಮಟನಗರಿ ಗದ್ದುಗೆ ಗುದ್ದಾಟ ಮುಕ್ತಾಯ

ಶಿವಮೊಗ್ಗ: ಕೆಲವು ಗೊಂದಲಗಳ ಮಧ್ಯೆಯೇ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಮುಕ್ತಾಯಗೊಂಡಿದೆ.ಹಲವು ಬಡಾವಣೆಗಳಲ್ಲಿ ಬೆಳಗ್ಗಯಿಂದಲೇ ಬಿರುಸಿನಿಂದ ಮತದಾನ ಪ್ರಕ್ರಿಯೆ ನಡೆಯಿತು. ಬೆಳ್ಳಂಬೆಳಗ್ಗೆ ನಗರದ ಮುರಾಣಕೇರಿಯಲ್ಲಿರುವ ಮತಕೇಂದ್ರದಲ್ಲಿ 90 ವರ್ಷದ ವೃದ್ದೆ ರಾಧಾಬಾಯಿ ಹುರುಪಿನಿಂದಲೇ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.

ವಾರ್ಡ್ ನಂಬರ 25ರ ಲಕ್ಷ್ಮಿ ದಾಶ್ಯಾಳ ಎಂಬ ಬಿಜೆಪಿ ಅಭ್ಯರ್ಥಿ ತನ್ನನ್ನು ಮತದಾನ ಕೇಂದ್ರದೊಳಗೆ ಬಿಡಲಿಲ್ಲವೆಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಇನ್ನು ವಾರ್ಡ್ ನಂಬರ್ 11ರಲ್ಲಿ ಶಾಸಕ ಯತ್ನಾಳ್ ಕುಟುಂಬ ಸಮೇತವಾಗಿ ಆಗಮಿಸಿ‌ ತಮ್ಮ ಹಕ್ಕನ್ನು ಚಲಾಯಿಸಿದರು. ಇನ್ನು MLC ಸುನೀಲ್ ಗೌಡ ಪಾಟೀಲ ಕೂಡ ಮತದಾನ ಮಾಡಿದರು.

ವಾರ್ಡ್ ನಂಬರ್ 10ರಲ್ಲಿ ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಉಮೇಶ ಕಾರಜೋಳ ಹಾಗೂ ಸೊಸೆ ಶ್ರಿದೇವಿ ಕಾರಜೋಳ ಮತ ಚಲಾವಣೆ ಮಾಡಿದರು. ಮತದಾನ ಮಾಡಿ ಮಾತನಾಡಿದ ಶಾಸಕ ಯತ್ನಾಳ್ ಬಿಜೆಪಿ ಬಹುಮತದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೂ ವಾರ್ಡ್‌ ನಂಬರ್ 11ರ ಮತಗಟ್ಟೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮುಸ್ಲಿಂ ಮತದಾರರ ಹೆಸರನ್ನು ಡಿಲೀಟ್ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಶಬ್ಬೀರ್ ಪಾಟೀಲ್ ಹಾಗೂ ಮತದಾರರು ಪ್ರತಿಭಟನೆ ನಡೆಸಿದರು.ಕೂಡಲೇ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಭೋಸಗಿ ಅವರೊಂದಿಗೂ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು.

ಒಟ್ಟಾರೆ ಕೆಲವೆಡೆ ಆತಂಕದ ವಾತಾವಾರಣದ ಮಧ್ಯೆಯೇ ಗುಮ್ಮಟನಗರಿಯಲ್ಲಿ ಪಾಲಿಕೆ ಚುನಾವಣೆ ಮುಕ್ತಾಯಗೊಂಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ 1,43,616 ಗಂಡು, 1,44,499 ಹೆಣ್ಣು, 100 ಇತರೆ ಹಾಗೂ 73 ಸೇವಾ ಮತದಾರರು ಸೇರಿ 2,88,288 ಮತದಾರರಿದ್ದು, ಇದೇ 30 ರಂದು ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದ್ದು, ಪಾಲಿಕೆಯ ಚುಕ್ಕಾಣಿ ಯಾರು ಹಿಡಿಯುತ್ತಾರೆಂಬುದನ್ನು ಕಾದು ನೋಡಬೇಕಿದೆ.

ಸುನೀಲ್ ಭಾಸ್ಕರ ಪವರ ಟಿವಿ ವಿಜಯಪುರ.

RELATED ARTICLES

Related Articles

TRENDING ARTICLES