Friday, November 15, 2024

ಸಿಎಂಗೆ ಮುಜುಗರ ತಂದ “ಕೈ” ನಾಯಕರ ಕ್ಯಾಂಪೇನ್..!

ಬೆಂಗಳೂರು: ರಾಜ್ಯದಲ್ಲಿ 2023ಕ್ಕೆ ವಿಧಾನಸಭಾ ಚುನಾವಣೆ ಈಗಾಗಲೇ ಪ್ರತಿಪಕ್ಷಗಳಲ್ಲಿ ಮಹತ್ವದ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷಗಳ ಪರಸ್ಪರರ ವಿರುದ್ದ ವಾಗ್ವಾದ ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಮುಂದಿನ ವಿಧಾನಸಭೆಯ ಚುನಾವಣೆಯನ್ನು ಗುರಿಯಾಗಿಟ್ಟುಕ್ಕೊಂಡು, ಕೆಪಿಸಿಸಿ ಕಚೇರಿಯ ಮುಂದೆ ರಾಜ್ಯ ಸರ್ಕಾರವನ್ನು ಮುಜುಗರಕ್ಕೆ ಈಡುಮಾಡುವಂತಹ ಬ್ಯಾನರ​ನ್ನು ಅಳವಡಿಸಿದೆ.

ಈ ಬ್ಯಾನರಲ್ಲಿ 40% ಕಮಿಷನ್ ಬ್ಯಾನರ್​ಗಳ ಅವಳವಡಿಕೆ ಮಾಡಲಾಗಿದ್ದು, ‘ಬಿಜೆಪಿ ಲಂಚ ರೇಟ್ ಕಾರ್ಡ್’ ಎಂಬ ಬ್ಯಾನರ್ ಗಳ ಅಳವಡಿಕೆ ಮಾಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಕಿಟ್ ಪೂರೈಕೆಯಲ್ಲಿ 75% ಕಮಿಷನ್, ಪಿಡಬ್ಲ್ಯೂಡಿ ಒಪ್ಪಂದ 40%, ಮಠಕ್ಕೆ ಅನುದಾನ 40%,ಉಪಕರಣಗಳ ಪೂರೈಕೆ 40ಽ, ಮೊಟ್ಟೆ ಪೂರೈಕೆ 40%, ಯಾವ್ಯಾವ ಹುದ್ದೆಗೆ ಎಷ್ಟು ಕೋಟಿ ಕಮಿಷನ್ ಕೊಡಬೇಕು ಅನ್ನೋ ಬ್ಯಾನರ್ ಗಳ ಅವಳವಡಿಕೆ ಮಾಡಲಾಗಿದ್ದು, ಸಾಕಷ್ಟು ಚರ್ಚೆಗೆ ಒಳಗಾಗಿದೆ.

ಬೆಸ್ಕಾಂ ಹುದ್ದೆಗೆ 1 ಕೋಟಿ, ಪಿಎಸ್ ಐ ಹುದ್ದೆಗೆ 10 ಲಕ್ಷದಿಂದ 1 ಕೋಟಿ, ಉಪನ್ಯಾಸಕ ಹುದ್ದೆಗೆ 30-50 ಲಕ್ಷ, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ 50-70 ಲಕ್ಷ, ಬಿಡಿಎ ಕಮಿಶನರ್ ಹುದ್ದೆಗೆ 10-15 ಕೋಟಿ,ಕೆಪಿಎಸ್ ಸಿ ಅಧ್ಯಕ್ಷ ಹುದ್ದೆಗೆ 3.75 ರಿಂದ 16 ಕೋಟಿ, ಸಬ್ ರಿಜಿಸ್ಟ್ರಾರ್ 50 ಲಕ್ಷದಿಂದ 10 ಕೋಟಿ, ಸಿಎಂ ಹುದ್ದೆಗೆ 2500 ಕೋಟಿ ಹಾಗೂ ಮಂತ್ರಿ ಹುದ್ದೆಗೆ 500 ಕೋಟಿ ಎಂಬ ಬ್ಯಾನರ್ ಅಳವಡಿಕೆ ಮಾಡಲಾಗಿದೆ.

ಈ ಬ್ಯಾನರ್ ಅಳವಡಿಕೆ ಮಾಡಿರುವುದು ರಾಜಕೀಯ ವಲಯದಲ್ಲಿ ತೀರ್ವ ಚರ್ಚೆಗೆ ಒಳಗಾಗಿದ್ದು, ಬಿಜೆಪಿ ಸರ್ಕಾರಕ್ಕೆ ಮುಜುಗರ ಪಡುವಂತೆ ಮಾಡಿದೆ.

RELATED ARTICLES

Related Articles

TRENDING ARTICLES