ಶಿವಮೊಗ್ಗ: ನಿಮಿಷದಲ್ಲಿ ಮೂರು ಸ್ಟೀಲ್ ಕಪ್ ಗಳ ಮೇಲೆ 110 ಪುಶ್ ಅಪ್ಸ್, ಗಾಜಿನ ಕಪ್ ಗಳ ಮೇಲೆ 30 ಸೆಕೆಂಡ್ ನಲ್ಲಿ 64 ಪುಶ್ ಅಪ್ಸ್ ಮಾಡಿದ ಶಿವಮೊಗ್ಗದ ಯುವ ವೈದ್ಯ ಡಾ. ರಾಹುಲ್ ದೇವರಾಜ್ ರವರ ವಿಶೇಷ ವಿಶ್ವ ದಾಖಲೆ.
ಪ್ರತಿಷ್ಠಿತ ದಾಖಲೆ ಪುಸ್ತಕಗಳಾದ ಲಿಂಕಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಇಂಟರ್ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಹಾರ್ವರ್ಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಇದೀಗ ಡಾ. ರಾಹುಲ್ ತಮ್ಮ ಹೆಸರು ಮಾಡಿದ್ದಾರೆ.
ಇವರು ಕೋವಿಡ್ ರೋಗಿಗಳಿಗೆ ಸಂಗೀತ ಜತೆಗೆ ಚಿಕಿತ್ಸೆ ನೀಡಲು ಮಾಡಿದ ಮೊದಲ ವೈದ್ಯರು ಎಂಬ ವಿಶ್ವ ದಾಖಲೆ ಬಳಿಕ, ವಿಶ್ವ ದಾಖಲೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡ ಇವರು ಈಗ ಇನ್ನೂ 4 ಹೊಸ ವಿಶ್ವ ದಾಖಲೆಗಳನ್ನು ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಒಂದು ನಿಮಿಷದಲ್ಲಿ ತಮನ್ನು 3 ಸ್ಟೀಲ್ ಗ್ಲಾಸ್ ಗಳ ಮೇಲೆ ಸಮತೋಲನ ಮಾಡಿ 110 ಪುಶ್ ಅಪ್ ಮಾಡಿ ಇಂಡಿಯಾ ಬುಕ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನಮ್ಮ ಹೆಸರುಗಳಿವೆ.
30 ಸೆಕೆಂಡುಗಳಲ್ಲಿ ಅತೀ ಹೆಚ್ಚು ಅಂದರೆ 85 ಪುಶ್ ಅಪ್ಸ್ ಮಾಡಿ ಹಿಂದಿನ 80 ರ ದಾಖಲೆ ಮುರಿದಿದ್ದು, 30 ಸೆಕೆಂಡುಗಳಲ್ಲಿ 3 ಗ್ಲಾಸ್ ಕಪ್ ಗಳ ಮೇಲೆ ಸಮತೋಲನ ಮಾಡಿ 64 ಪುಶ್ ಅಪ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ.
30 ಸೆಕೆಂಡುಗಳಲ್ಲಿ 3 ಸ್ಟೀಲ್ ಗ್ಲಾಸ್ ಗಳ ಮೇಲೆ ಸಮತೋಲನ ಮಾಡಿ 74 ಪುಶ್ ಅಪ್ ಮಾಡಿ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ನಿರ್ಮಿಸಲಾಗಿದೆ.
ವೈದ್ಯರಾಗಿ ಒಂದೆಡೆ ತಮ್ಮ ಬಳಿ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಇವರು ಮತ್ತೊಂದೆಡೆ ಕ್ರೀಡೆ, ಕಲೆ, ಸಂಗೀತ ಹಾಗು ತಮ್ಮ ಸಮಾಜಮುಖಿ ಕೆಲಸಗಳಿಂದಾಗಿ ಹಾಗೂ ಈ ರೀತಿಯ ವಿಭಿನ್ನ ವಿಶ್ವ ದಾಖಲೆಗಳಿಂದ ಹೆಸರುವಾಸಿಯಾಗಿದ್ದಾರೆ.
ಈ ಹಿಂದೆ ಇವರ ಸಾಧನೆ ಗುರುತಿಸಿ ಇವರಿಗೆ ಗೌರವ ಡಾಕ್ಟರೇಟ್ ಪದವಿ ಹಾಗೂ ವೈದ್ಯ ಭೂಷಣ ಪ್ರಶಸ್ತಿ ಕೂಡ ಓಲಿದು ಬಂದಿದೆ.