ಆಸ್ಟ್ರೇಲಿಯಾ: ಟಿ-20 ವಿಶ್ವಕಪ್ನ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಭಾರತ ತಂಡ 56 ರನ್ಗಳ ಹಂತರದಿಂದ ಗೆಲುವು ಸಾಧಿಸಿತು.
ಆಸ್ಟ್ರೇಲಿಯಾದಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ-20 ಸೂಪರ್ 12 ಹಂತದ ಗ್ರೂಪ್ ಬಿ ಟಿ-20 ಪಂದ್ಯದಲ್ಲಿ ಭಾರತ ತಂಡ ನೆದರ್ಲೆಂಡ್ಸ್ ತಂಡವನ್ನ ಬಗ್ಗುಬಡಿದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತು. ಭಾರತ ಪರ ರೋಹಿತ್ ಶರ್ಮಾ 53 ರನ್ ಹೊಡೆದು ಔಟ್ ಆದರೆ, ವಿರಾಟ್ ಕೊಹ್ಲಿ 62, ಸೂರ್ಯ ಕುಮಾರ್ ಯಾದವ್ 51 ರನ್ ಹೊಡೆದು ಅಜೇಯರಾಗಿ ಉಳಿದರು.
180 ರನ್ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರ್ ಕಲೆಹಾಕುವಲ್ಲಿ ಸಶಕ್ತವಾಯಿತು. ಈ ಮೂಲಕ ಭಾರತ ತಂಡ 56 ರನ್ಗಳಿಂದ ಜಯಗಳಿಸಿತು.
ಭುವನೇಶ್ವರ್ ಕುಮಾರ್ 2, ಅರ್ಷದೀಪ್ ಸಿಂಗ್ 2, ಅಕ್ಸರ್ ಪಟೇಲ್ 2, ರವಿಚಂದ್ರನ್ ಅಶ್ವೀನ್ 2, ಮೊಹಮ್ಮದ್ ಶಮಿ 1 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಭಾರತ ತಂಡ ಗ್ರೂಪ್ ಬಿ ಹಂತದ ಟೀಮ್ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು.