ದೆಹಲಿ: ರಾಜ್ಯದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ರವರು ಎಐಸಿಸಿ ಅಧ್ಯಕ್ಷರಾಗಿ ನೇಮಕರಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಹೊಸ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಹೊಸ ಕಮಿಟಿ ರಚನೆಗೆ ಖರ್ಗೆ ಮುಂದಾಗಿದ್ದಾರೆ. ಮುಂದಿನ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಪಕ್ಷ ಬಿಡಲು ತಯಾರಾಗುತ್ತಿರುವ ನಾಯಕರ ಮನವೊಲಿಸುವುದು ನೂತನ ಅಧ್ಯಕ್ಷರ ಮುಂದಿರುವ ಬಹುದೊಡ್ಡ ಸವಾಲಾಗಿರುವ ವಿಷಯವಾಗಿದೆ.
ಎಐಸಿಸಿ ನೂತನ ಕಮಿಟಿಯು ಒಟ್ಟು 47 ಸದಸ್ಯರಿಂದ ಕೂಡಿರುವ ಕಮಿಟಿಯು, ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕಮಿಟಿಗೆ ಇದ್ದು, ಹಿರಿಯ ನಾಯಕರಿಗೆ ಕಮಿಟಿಯಲ್ಲಿ ಸ್ಥಾನವಿರುತ್ತದೆ. ಖರ್ಗೆ ಅಧ್ಯಕ್ಷತೆಯಲ್ಲಿಯೇ ಕಮಿಟಿ ರಚನೆಯಾಗಲಿದೆ.
ಈ ನೂತನ ಕಮಿಟಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಸದಸ್ಯರು ಮುಖ್ಯ ಪಾತ್ರವಹಿಸಲಿದ್ದು, ರಾಜ್ಯದ ಮೂವರಿಗೆ ಕಮಿಟಿಯಲ್ಲಿ ಸ್ಥಾನಮಾನ ಸಿಗಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಿಂದ ದಿನೇಶ್ ಗುಂಡೂರಾವ್, ಹೆಚ್.ಕೆ ಪಾಟೀಲ್ ಹಾಗೂ ಕೆ.ಹೆಚ್ ಮುನಿಯಪ್ಪ ರವರಿಗೆ ಸದಸ್ಯತ್ವ ಸ್ಥಾನ ಸಿಕ್ಕಿದೆ ಎಂದು ಕಾಂಗ್ರೆಸ್ ನಿನ್ನೆ ಟ್ವೀಟರ್ನಲ್ಲಿ ಬಿಡುಗಡೆ ಮಾಡಿದೆ.