ಬೆಂಗಳೂರು : ದೀಪದಿಂದ ದೀಪ ಹಚ್ಚಿ ದೀಪಾವಳಿ ಆಚರಿಸಿ ಅಂತಾ ಎಷ್ಟೇ ಅರಿವು ಮೂಡಿಸಿದ್ರೂ, ಪಟಾಕಿಗಳ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಈ ಬಾರಿಯೂ ಕೂಡ ಬೆಳಕಿನ ಹಬ್ಬ ದೀಪಾವಳಿ ವೇಳೆ ಸಾಕಷ್ಟು ಮಕ್ಕಳ ಬದುಕು ಕತ್ತಲಾಗಿದೆ. ನಗರದಲ್ಲಿ ಪಟಾಕಿಯಿಂದ ಗಾಯಗೊಂಡವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿವೆ. ಕಳೆದ ಮೂರು ದಿನದಿಂದ 80 ಹೆಚ್ಚು ಕೇಸ್ಗಳು ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿವೆ. ಇದ್ರಲ್ಲಿ ಹಲವು ಗಂಭೀರ ಪ್ರಕರಣಗಳು ಆಗಿದ್ದು, ಕೆಲವರು ದೃಷ್ಠಿಯನ್ನೇ ಕಳೆದುಕೊಂಡಿದ್ದಾರೆ.
ಪಟಾಕಿ ಬಗ್ಗೆ ಸರ್ಕಾರ ಹಾಗೂ ವೈದ್ಯರು ಎಷ್ಟೇ ಜಾಗೃತಿ ಮೂಡಿಸಿದರೂ, ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗ್ತಿವೆ.. ನಗರ ಮಿಂಟೋ ಆಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಅಧಿಕ ಪ್ರಕರಣಗಳು ವರದಿಯಾಗಿವೆ.. ಹಲವು ಬಾಲಕರ ಕಣ್ಣಿಗೆ ಗಂಭೀರ ಹಾನಿಯಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಕತ್ತಲಾಯ್ತು ಬೆಳಕಿನ ಹಬ್ಬ..!
ಮಿಂಟೋ ಕಣ್ಣಿನ ಆಸ್ಪತ್ರೆ – 20
ನಾರಾಯಣ ನೇತ್ರಾಲಯ – 20
ನೇತ್ರಧಾಮ ಕಣ್ಣಿನ ಆಸ್ಪತ್ರೆ – 23
ಶಂಕರ ಕಣ್ಣಿನ ಆಸ್ಪತ್ರೆ – 13
ಮೋದಿ ಕಣ್ಣಿನ ಆಸ್ಪತ್ರೆ – 02
ಒಟ್ಟಾರೆ ದೀಪಾವಳಿ ಹಬ್ಬ ಬೆಳಕಿನಿಂದ ಕತ್ತಲೆಗೆ ಹೋಗಬಾರದು. ಹೀಗಾಗಿ ಪಟಾಕಿ ಹಚ್ಚುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಕೆಲವು ಅಪಾಯಕಾರಿ ಪಟಾಕಿಗಳಿಂದ ದೂರವಿರಬೇಕಾಗಿದೆ.
ಕೃಷ್ಣಮೂರ್ತಿ, ಪವರ್ ಟಿವಿ, ಬೆಂಗಳೂರು