Friday, November 22, 2024

ವಿಶ್ವಕಪ್​ ಮೊದಲ t-20 ಪಂದ್ಯ; ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲ್ಯಾಂಡ್​ ಭರ್ಜರಿ ಗೆಲುವು

ಆಸ್ಟೇಲಿಯಾ: ವಿಶ್ವಕಪ್​ ಸೂಪರ್​ 12 ಟೀಮ್​ಗಳ ಪಂದ್ಯ ಇಂದಿನಿಂದ ಆರಂಭಗೊಂಡಿದ್ದು, ಮೊದಲ ಟಿ-20 ಪಂದ್ಯದಲ್ಲಿಯೇ ದೈತ್ಯ ಆಸ್ಟ್ರೇಲಿಯಾ ತಂಡದ ವಿರುದ್ಧ ನ್ಯೂಜಿಲ್ಯಾಂಡ್​ ತಂಡ ಭರ್ಜರಿ ಜಯಗಳಿಸಿದೆ.

ವಿಶ್ವಕಪ್​ನ ಗ್ರೂಪ್​ ಎ ತಂಡವಾದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್​ ತಂಡಗಳ ನಡುವೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿಂದು ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್​ ಇಳಿದ ನ್ಯೂಜಿಲ್ಯಾಂಡ್​ ತಂಡ ನಿಗದಿತ 20 ಓವರ್​​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 200 ರನ್​ ಗಳಿಸಿತು. ಕಾನ್ವೇ 92 ರನ್​ಗಳಿಸಿ ನ್ಯೂಜಿಲ್ಯಾಂಡ್​ ತಂಡ ಅತ್ಯಧಿಕ ರನ್​ ಕಲೆಹಾಕುವಲ್ಲಿ ಸಹಕಾರಿಯಾದರು.

ನ್ಯೂಜಿಲ್ಯಾಂಡ್​ ತಂಡ ನೀಡಿದ 200 ರನ್​ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಆರಂಭದ 50 ರನ್​ಗಳಿಸುವಷ್ಟರಲ್ಲಿಯೇ ಪ್ರಮುಖ 5 ಆಟಗಾರರ ವಿಕೆಟ್​ ಕಳೆದುಕೊಂಡು ಸಂಕಷ್ಠ ಎದುರಿಸಿತು. ಇದರ ಮುಂದುವರೆದು ಭಾಗವಾಗಿ ಆಸ್ಟ್ರೇಲಿಯಾ ತಂಡ 17.1 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 111 ರನ್​ ಬೆನ್ನಟ್ಟಿತು. ಆಸ್ಟ್ರೇಲಿಯಾ ಪರ ಗ್ಲೆನ್ ಮ್ಯಾಕ್ಸ್‌ವೆಲ್ 28, ಪ್ಯಾಟ್ ಕಮ್ಮಿನ್ಸ್ 21 ರನ್​ ಕಲೆಹಾಕಿದರೆ, ಉಳಿದ ಆಟಗಾರರು ಎರಡಂಕಿ ದಾಟುವಲ್ಲಿ ಎಡವಿದರು.

ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ 89 ರನ್​ಗಳ ಅಂತರದಿಂದ ನ್ಯೂಜಿಲ್ಯಾಂಡ್​ ತಂಡ ಜಯಗಳಿಸಿತು. ನ್ಯೂಜಿಲ್ಯಾಂಡ್​ ಪರ ಮಿಚೆಲ್ ಸ್ಯಾಂಟ್ನರ್ 3, ಟಿಮ್ ಸೌಥಿ 3, ಟ್ರೆಂಟ್ ಬೌಲ್ಟ್ 2 ವಿಕೆಟ್​ ಪಡೆದು ಮಿಂಚಿದರು.

RELATED ARTICLES

Related Articles

TRENDING ARTICLES