Tuesday, November 5, 2024

ಕೇದಾರನಾಥ ರೋಪ್‌ವೇ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ಕೇದಾರನಾಥ ದೇಗುಲದಲ್ಲಿ ಮೋದಿ ಪೂಜೆ ಪುನಸ್ಕಾರ.( ಫ್ಲೋ) ವಿಶೇಷವಾದ ಪಹಾಡಿ ಉಡುಪು ತೊಟ್ಟು ಪ್ರಧಾನಿ ಗಮನ ಸೆಳೆದಿದ್ದಾರೆ. ಹೌದು, ಉತ್ತರಾಖಂಡದ ಪವಿತ್ರ ದೇಗುಲದಲ್ಲಿ ಹಿಮಾಚಲ ಪ್ರದೇಶದ ಮಹಿಳೆಯರು ತಯಾರಿಸಿದ್ದ ಸಾಂಪ್ರದಾಯಿಕ ಪಹಾಡಿ ಉಡುಪನ್ನು ಧರಿಸಿದ ಪ್ರಧಾನಿ ಪೂಜೆ ನೆರವೇರಿಸಿದರು. ಮೋದಿ ಧರಿಸಿದ ಉಡುಪು ಜನಪ್ರಿಯವಾಗಿದ್ದು ‘ಚೋಳ ಡೋರಾ’ ಎಂದು ಕರೆಯಲಾಗುತ್ತದೆ.

ಉತ್ತರಾಖಂಡಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ 3400 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕೇದಾರನಾಥ ರೋಪ್‌ವೇ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ರು. ಬಳಿಕ ಆದಿ ಗುರುಗಳಾದ ಶಂಕರಾಚಾರ್ಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ರು.

ಮಾಣ ಗ್ರಾಮದಲ್ಲಿ ರಸ್ತೆ ಮತ್ತು ರೋಪ್‌ವೇ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ, ನದಿ ತೀರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ್ರು. ಕೇದಾರನಾಥದಲ್ಲಿ ರೋಪ್‌ವೇ ಸುಮಾರು 9.7 ಕಿಮೀ ಉದ್ದವಿದೆ. ಇದು ಗೌರಿಕುಂಡ್ ಅನ್ನು ಕೇದಾರನಾಥಕ್ಕೆ ಸಂಪರ್ಕಿಸುತ್ತದೆ. ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 6-7 ಗಂಟೆಗಳಿಂದ ಕೇವಲ 30 ನಿಮಿಷಗಳಿಗೆ ತಗ್ಗಲಿದೆ.

ಹೇಮಕುಂಡ್ ರೋಪ್ವೇ ಗೋವಿಂದಘಾಟ್ನಿಂದ ಹೇಮಕುಂಡ್ ಸಾಹಿಬ್ಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸುಮಾರು 12.4 ಕಿಮೀ ಉದ್ದವಿರುತ್ತದೆ. ಇದು ಪ್ರಯಾಣದ ಸಮಯವನ್ನು ಒಂದು ದಿನಕ್ಕಿಂತ ಹೆಚ್ಚು ಸಮಯದಿಂದ ಕೇವಲ 45 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ವ್ಯಾಲಿ ಆಫ್ ಫ್ಲವರ್ಸ್ ನ್ಯಾಷನಲ್ ಪಾರ್ಕ್ಗೆ ಗೇಟ್ವೇ ಆಗಿರುವ ಘಂಗಾರಿಯಾವನ್ನು ಈ ರೋಪ್ವೇ ಸಂಪರ್ಕಿಸುತ್ತದೆ.

ಕೇದಾರನಾಥ ಮತ್ತು ಬದರಿನಾಥ ಹಿಂದೂಗಳ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಹೀಗಾಗಿ, ಕೇದಾರನಾಥದಿಂದ ಬದರಿನಾಥಕ್ಕೆ ತೆರಳಿದ ಪ್ರಧಾನಿ ಅಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ರು..ಬದರಿನಾಥ ದೇವಸ್ಥಾನದಲ್ಲಿ ಶ್ರೀಗಳ ದರ್ಶನ ಮತ್ತು ಪೂಜೆ ಸಲ್ಲಿಸಿದ್ರು.

RELATED ARTICLES

Related Articles

TRENDING ARTICLES