ಬೆಂಗಳೂರು : 2023ರ ಎಲೆಕ್ಷನ್‌ಗೆ ಜೆಡಿಎಸ್ ರಣತಂತ್ರ- ದಕ್ಷಿಣ ಕರ್ನಾಟಕದಲ್ಲಿ ಗ್ರಾಮ ವಾಸ್ತವ್ಯಕ್ಕೆ ಹೆಚ್‌ಡಿಕೆ ಪ್ಲ್ಯಾನ್ ಮಾಡಿದ್ದು, ಕಾಂಗ್ರೆಸ್- ಬಿಜೆಪಿ ಯಾತ್ರೆಗೆ ದಳಪತಿ ಟಕ್ಕರ್ ಕೊಡಲು ಸಿದ್ಧತೆ ನಡೆಸಿದೆ.
ನಗರದಲ್ಲಿ ನವೆಂಬರ್ ೧ ರಿಂದ ಆರಂಭವಾಗಲಿದೆ ಜೆಡಿಎಸ್ ನಾಯಕ ಎಚ್ಡಿಕೆ ಗ್ರಾಮ ವಾಸ್ತವ್ಯ ಹೂಡಲಿದ್ದು, ಆರಂಭದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಬಳಿಕ ಕಲ್ಯಾಣ ಕರ್ನಾಟಕಕ್ಕೆ ಕಾಲಿಡಲಿರುವ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ, ಆಡಳಿತ- ವಿರೋಧ ಪಕ್ಷದ ಅಬ್ಬರಕ್ಕೆ ತಮ್ಮದೇ ದಾಟಿಯಲ್ಲಿ ತಿರುಗೇಟು ಕೊಡಲು ಸಿದ್ಧತೆ ನಡೆಸಿದ್ದಾರೆ.
ಇನ್ನು, ಮೂರು ಪಕ್ಷಗಳಿಗೂ ಕಲ್ಯಾಣ ಕರ್ನಾಟಕ ನೆಲೆ ಕೊಟ್ಟಿದೆ. ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಬಲ ಹೊಂದಿವೆ. ಉತ್ತರ ಕರ್ನಾಟಕದಲ್ಲಿ ಆಡಳಿತ ಪಕ್ಷಕ್ಕೆ ಜನ ಬೆಂಬಲ ಹೆಚ್ಚಿದ್ದು, ಕಲ್ಯಾಣ ಕರ್ನಾಟಕದಲ್ಲಿ ಮೂರು ಪಕ್ಷಗಳಿಗೂ ಜನಬೆಂಬಲ ಹೊಂದಿದ್ದು, ರಾಜ್ಯದಲ್ಲಿ ಮುಂದಿನ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಲ್ಯಾಣ ಕರ್ನಾಟಕ ಭಾಗವನ್ನು ಯಾರೂ ನಿರ್ಲಕ್ಷಿಸುವಂತಿಲ್ಲ.