ಬೆಂಗಳೂರು: ನವೆಂಬರ್ 11ಕ್ಕೆ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸೋಕೆ ಸಜ್ಜಾಗಿವೆ. ಈ ವಾರ ಸಿನಿರಸಿಕರಿಗೆ ಸುಗ್ಗಿ ಕಾಲವಾಗಿದೆ. ಕೊರೊನಾ ಇಂದ ಕುಂಟುತ್ತಾ ಸಾಗಿದ್ದ ಸಿನಿಮಾಗಳೆಲ್ಲಾ ಎದೆ ಹುಬ್ಬಿಸಿ ಈಗ ತೆರೆಗೆ ಬರ್ತಿವೆ. ಇನ್ನೂ ಸ್ಯಾಂಡಲ್ವುಡ್ ಚಿತ್ರಗಳೆಲ್ಲಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಛಾಪು ಮೂಡಿಸ್ತಾ ಇರೋದ್ರಿಂದ ಸಹಜವಾಗಿ ನಿರೀಕ್ಷೆಗಳು ಗರಿಗೆದರಿವೆ. ಈ ಬಾರಿ ನವೆಂಬರ್ 11ಕ್ಕೆ ಕನ್ನಡದ ಮೂರು ಚಿತ್ರಗಳು ಸಿಲ್ವರ್ ಸ್ಕ್ರೀನ್ ಮೇಲೆ ತಮ್ಮ ತಾಕತ್ತು ಪ್ರದರ್ಶಿಸಲಿವೆ.
ಇಂಡಸ್ಟ್ರಿಯಲ್ಲಿ ಬಿಗ್ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗಲಿದೆ. ಗಾಳಿಪಟ 2 ಚಿತ್ರದ ನಂತರ ಗಣಿ ಕಂಬ್ಯಾಕ್ ಆಗಿದ್ದು ತ್ರಿಬಲ್ ರೈಡ್ ಸವಾರಿಗೆ ಸಜ್ಜಾಗಿದ್ದಾರೆ. ಮೂರು ಚಂದದ ಚೆಲುವೆಯರ ಜೊತೆ ಗೋಲ್ಡನ್ ಗಣಿ ಜಾಲಿರೈಡ್ ಹೋಗ್ತಿದ್ದು ಅದಿತಿ, ಮೇಘಾ ಶೆಟ್ಟಿ, ರಚನಾ ಇಂದರ್ ಸಾಥ್ ನೀಡ್ತಿದ್ದಾರೆ. ಇದರ ಜತೆಗೆ ಚಿತ್ರಪ್ರೇಮಿಗಳ ಬಾಯಲ್ಲಿ ದಿಲ್ಪಸಂದ್ ಸಿಹಿರುಚಿ ಬಾಯಲ್ಲಿ ನೀರೂರಿಸಿದೆ.
ಲಕ್ಕಿಮ್ಯಾನ್ ಚಿತ್ರದ ನಂತ್ರ ಡಾರ್ಲಿಂಗ್ ಕೃಷ್ಣ ಕೂಡ ಭರವಸೆ ಮೂಡಿಸಿದ್ದಾರೆ. ನಿಶ್ವಿಕಾ ಹಾಗೂ ಕೃಷ್ಣ ಕಾಂಬೋದಲ್ಲಿ ದಿಲ್ಪಸಂದ್ ಸಹಿ ತಿನಿಸೋಕೆ ಚಿತ್ರತಂಡ ಸಜ್ಜಾಗಿದೆ. ಚಿತ್ರದ ಟ್ರೈಲರ್ ಕೂಡ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದು ಪ್ರೇಕ್ಷಕರ ದಿಲ್ ಗೆಲ್ಲಬಹುದು ಅನ್ನೋ ಖಾತ್ರಿ ಮೂಡಿಸಿದೆ.
ತ್ರಿಬಲ್ ರೈಡಿಂಗ್, ದಿಲ್ ಪಸಂದ್ ಜೊತೆ ಜೊತೆಯಾಗಿ ಚಂದನವನದಲ್ಲಿ ಕಮಾಲ್ ಮಾಡೋಕೆ ಬರ್ತಾ ಇದೆ ರಾಣ. ಸ್ಯಾಂಡಲ್ವುಡ್ ಪಡ್ಡೆ ಹುಲಿ ಶ್ರೇಯಸ್ ಮಂಜು ಹಾಗೂ ಗ್ಲಾಮರಸ್ ಗೊಂಬೆ ರೀಷ್ಮಾ ನಾಣಯ್ಯ ಕಾಂಬಿನೇಷನ್ನಲ್ಲಿ ರಾಣ ಕೂಡ ನಿರೀಕ್ಷೆ ಮೂಡಿಸಿದೆ. ಗಲ್ಲಿ ಬಾಯ್, ಪ್ಯಾಟೆ ಗರ್ಲ್ ಜೋಡಿಗೆ ಪ್ರೇಕ್ಷಕ ಸೈ ಅಂತಾನಾ ಅನ್ನೋದನ್ನು ಕಾದು ನೋಡ್ಬೇಕಿದೆ.
ಒಟ್ಟಾರೆ ಕನ್ನಡದ ಮೂರು ಚಿತ್ರಗಳು ಒಂದೇ ದಿನ ಸ್ಯಾಂಡಲ್ವುಡ್ನಲ್ಲಿ ದಂಡಯಾತ್ರಗೆ ಸಜ್ಜಾಗಿವೆ. ಪ್ರೇಕ್ಷಕರ ಜೈಕಾರ ಹೇಗಿರುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.
ರಾಕೇಶ್ ಅರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ