ಪಶ್ಚಿಮ ಬಂಗಾಳ; ಕ್ರಿಕೆಟಿಗ ಸೌರವ್ ಗಂಗೂಲಿ ಅವರನ್ನು ಅನ್ಯಾಯವಾಗಿ ಬಿಸಿಸಿಐನಿಂದ ಹೊರಗಿಡಲಾಗಿದೆ. ನನಗೆ ತುಂಬಾ ದುಃಖವಾಗಿದೆ. ಗಂಗೂಲಿ ಕ್ರಿಕೆಟ್ನಲ್ಲಿ ತಮ್ಮದೇಯಾದ ಛಾಪು ಮೂಡಿಸಿ ಜನಪ್ರೀಯವಾಗಿದ್ದರು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇಂದು ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸಿಎಂ ಬ್ಯಾನರ್ಜಿ, ಸೌರವ್ ಗಂಗೂಲಿ ನಮ್ಮ ಹೆಮ್ಮೆ. ಅವರು ತಮ್ಮ ಕ್ರೀಡೆ ಮತ್ತು ಆಡಳಿತ ವೃತ್ತಿಯನ್ನು ಕೌಶಲ್ಯದಿಂದ ನಿರ್ವಹಿಸಿದ್ದಾರೆ. ಅವರು ಬಿಸಿಸಿಐ ಅಧ್ಯಕ್ಷರಾಗಿದ್ದವರು. ಅವರನ್ನು ಅನ್ಯಾಯದ ರೀತಿಯಲ್ಲಿ ಈಗ ಬಿಸಿಸಿಐ ಅಧ್ಯಕ್ಷ ಗಿರಿಯಿಂದ ಹೊರಗಿಡಲಾಯಿತು. ಅದಕ್ಕೆ ಪರಿಹಾರವಾಗಿ ಐಸಿಸಿಗೆ ಕಳುಹಿಸಬೇಕೆಂದು ಕೇಳಿಕೊಂಡರು.
ಸೌರವ್ ಗಂಗೂಲಿ ಬಿಸಿಸಿ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದಾರೆ. ಅವರನ್ನು ಐಸಿಸಿ(ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಗೆ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಮಮತಾ ಮನವಿ ಮಾಡಿದರು.
ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಸೌರವ್ ಗಂಗೂಲಿ ಅವರಿಗೆ ಅವಕಾಶ ನೀಡಬೇಕು ಎಂದು ನಾನು ಪ್ರಧಾನಿಗೆ ವಿನಂತಿಸಿದ ಬ್ಯಾನರ್ಜಿ, ಗಂಗೂಲಿ ಜನಪ್ರಿಯ ವ್ಯಕ್ತಿಯಾಗಿರುವುದರಿಂದ ಅವರು ವಂಚಿತರಾಗಿದ್ದಾರೆ. ಕ್ರಿಕೆಟ್ ನಲ್ಲಿ ರಾಜಕೀಯ ನಿರ್ಧಾರ ತೆಗೆದುಕೊಳ್ಳಬೇಡಿ, ಅವರು ಯಾವುದೇ ರಾಜಕೀಯ ಪಕ್ಷದ ಸದಸ್ಯರಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದರು. ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 20 ರಂದು ನಾಮಪತ್ರ ಸಲ್ಲಿಸಬೇಕು.