Friday, May 3, 2024

ಆಪರೇಷನ್ ಬುಲ್ಡೋಜರ್ 2.0ಗೆ ‘ಬೃಹತ್’ ಬ್ರೇಕ್

ಬೆಂಗಳೂರು : ಮೂರು ದಿನ ಅಬ್ಬರಿಸಿ ಬೊಬ್ಬಿರಿದಿದ್ದ ಪಾಲಿಕೆ ಜೆಸಿಬಿಗಳು ನಾಲ್ಕನೇ ದಿನಕ್ಕೆ ಗಫ್ ಚುಪ್ ಆಗಿದೆ, ಬಹುತೇಕ ಕಡೆಗಳಲ್ಲಿ ಕಂದಾಯ ಇಲಾಖೆ ಮಾರ್ಕಿಂಗ್ ಮಾಡಿದ್ದನ್ನೂ ತೆರವು ಮಾಡಿದೀವಿ, ಮತ್ತೆ ಮಾರ್ಕಿಂಗ್ ಮಾಡಿ ಕೊಟ್ರೆ ತೆರವು ಮಾಡ್ತೀವಿ ಅಂತ ಪಾಲಿಕೆ ಒತ್ತುವರಿಗೆ ಕದನ ವಿರಾಮ ಷೋಷಿಸಿದೆ.

ಕಳೆದ 3 ದಿನಗಳಿಂದ ಬೆಂಗಳೂರಿನಲ್ಲಿ ಒತ್ತುವರಿ 2.0 ತೆರವು ಕಾರ್ಯಾಚರಣೆ ಕಂಪ್ಲೀಟಾಗಿ ನಿಂತು ಹೋಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ಹಾಗೂ ದಾಸರಹಳ್ಳಿ ವಲಯಗಳಲ್ಲಿ ಒತ್ತುವರಿ ತೆರವು ಸ್ಥಗಿತಗೊಂಡಿದೆ. ಇನ್ನು ಪಾಲಿಕೆ ಅಧಿಕಾರಿಗಳು ಹೊಸ ಡ್ರಾಮವೊಂದನ್ನು ಶುರು ಮಾಡಿದ್ದು, ಒತ್ತುವರಿ ಮಾಡಿದ ಕಟ್ಟಡಗಳನ್ನು ಈಗಾಗಲೇ ತೆರವು ಮಾಡಿದ್ದೀವಿ, ಮತ್ತೆ ಕಂದಾಯ ಇಲಾಖೆ ಅಧಿಕಾರಿಗಳು ಮಾರ್ಕ್ ಮಾಡಿ ಕೊಟ್ರೆ ಮತ್ತೆ ತೆರವು ಕಾರ್ಯ ಶುರು ಮಾಡ್ತಿವಿ, ಇನ್ನು ಕಂದಾಯ ಇಲಾಖೆ‌ ಜೊತೆ ಜಂಟಿಯಾಗಿ ಸರ್ವೇ ಮಾಡಬೇಕಿದೆ ಹೀಗಾಗಿ ಇದಕ್ಕೆ ಕಾಲಾವಕಾಶ ಬೇಕು. ನಾವು ಕಂದಾಯ ಇಲಾಖೆ ಜೊತೆ ಚರ್ಚೆ ಮಾಡಿದ್ದೇವೆ.ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದವರ ಒತ್ತುವರಿ ಮರು ಸರ್ವೇ ಮಾಡ್ತೇವೆ. ಎಲ್ಲೂ ಕೂಡ ಒತ್ತುವರಿ ತೆರವು ಕಾರ್ಯಾಚರಣೆ ನಿಂತಿಲ್ಲ, ಪ್ರಿಪರೇಷನ್ ಆಗಬೇಕಿದೆ. ಹ್ಯೂಮನ್ ಹಾಗೂ ಮೆಕಾನಿಕಲ್ ಸೋರ್ಸ್ ಬೇಕಿದೆ, ಈ ಹಿನ್ನೆಲೆಯಲ್ಲಿ ಸ್ವಲ್ಪ ತಡವಾಗ್ತಿದೆ.ರಾಜಕಾಲುವೆ ಒತ್ತುವರಿ ತೆರವು ಮಾತ್ರ ಮಾಡ್ತಿದೀವಿ ಅಂತ ಬಿಬಿಎಂಪಿ ಸಬೂಬು ನೀಡ್ತಿದೆ.

ಇನ್ನೂ ಒತ್ತುವರಿ ತೆರವು ಕಾರ್ಯ ಈವರೆಗೆ ಕೇವಲ 10 ಮನೆಗಳನ್ನು ಹಾಗೂ ಒಂದು ದೊಡ್ಡ ರಾಜಕಾಲುವೆ ಒತ್ತುವರಿ ತೆರವು ಬಿಟ್ಟರೆ, ಬಾಕಿ ಉಳಿದವೆಲ್ಲಾ ತೂಬುಗಾಲುವೆ ಒತ್ತುವರಿ ತೆರವಿನಲ್ಲೇ ಪಾಲಿಕೆ ಕಾಲಾಹರಣ ಮಾಡಿದೆ. ಪ್ರಭಾವಿಗಳ ಮನೆ ಗೇಟ್ ಹತ್ರನೂ ಇವರು ಸುಳಿಯಲ್ಲ. ಶ್ರೀಮಂತರ ಒತ್ತುವರಿ ಲಿಸ್ಟ್ ನೋಡುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಮನೆ ಸೇರಿದ್ದಾರೆ. ಬಿಬಿಎಂಪಿಯ ಈ ನಾಟಕೀಯ ಆಟ ಜನಸಾಮಾನ್ಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯಕ್ಕೆ ಆದ್ಯತೆ ಮೇರೆಗೆ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತೇವೆ. ಬಫರ್ ಝೋನ್ ತೆರವು ಮಾಡೋದು ಸುಲಭದ ಮಾತಲ್ಲ ಅದಕ್ಕಂತಲೇ ಒಂದಿಷ್ಟು ರೀತಿ ರಿವಾಜುಗಳಿವೆ, ಅದನ್ನು ಪಾಲಿಸಬೇಕು. ಮುಂದಕ್ಕೆ ನಡೆಯುವ ಸರ್ವೇಗಳಲ್ಲಿ ಕೆಲವು ಕಡೆ ಬಫರ್ ಝೋನ್‌ಗಳಲ್ಲೂ ಸರ್ವೇ ಮಾಡಲಾಗುತ್ತೆ. ಯಾವಾಗ ಬಫರ್ ಝೋನ್ ನಿರ್ಮಾಣ ಆಯ್ತು ಅಂತೆಲ್ಲಾ ನೋಡಬೇಕು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸರ್ವೇ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಅಂತ ಮತ್ತೆ ಅದೇ ದೊಡ್ಡವರ ಪರ ರಕ್ಷಣೆಗೆ ನಿಂತಿದ್ದಾರೆ.

ಒಟ್ಟಿನಲ್ಲಿ ರಾಜಕಾಲುವೆ ತೆರವು ಅಂತ ಗಲ್ಲಿಯಿಂದ ವಿಧಾನಸೌಧದವರೆಗೂ ಚರ್ಚೆ ನಡೆದಿತ್ತು. ಸರ್ಕಾರವೂ ನಾವು ಯಾರೂ ಮಾಡದ ಸಾಧನೆ ಮಾಡ್ತಿರೋದಾಗಿ ಬಡಾಯಿ ಕೊಚ್ಚಿಕೊಂಡಿತ್ತು.  ಆದ್ರೆ, ಒತ್ತುವರಿ ತೆರವು 2,0 ಆರಂಭವಾದ ಮೂರೇ ದಿನಕ್ಕೆ ಸರ್ಕಾರ ಹಾಗೂ ಪಾಲಿಕೆಯ ನಿಜ ಬಣ್ಣ ಬಯಲಾಗಿದೆ. ಇವ್ರದ್ದು ಕೇವಲ ಆರಂಭಿಕ ಶೂರತ್ವ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES