Friday, November 22, 2024

ಭ್ರಷ್ಟ ಪಾಲಿಕೆ ಅಧಿಕಾರಿಗೆ 4 ವರ್ಷ ಜೈಲು, 1 ಕೋಟಿ ರೂ ದಂಡ; ಕೋರ್ಟ್​ ತೀರ್ಪು

ಮಂಗಳೂರು; ಮಂಗಳೂರು ಮಹಾನಗರ ಪಾಲಿಕೆಯ ಭ್ರಷ್ಟ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ ದಂಡ ವಿಧಿಸಿ ಕೋರ್ಟ್​ ತೀರ್ಪು ನೀಡಿದೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಶಿವಲಿಂಗ ಕೊಂಡಗುಳಿ ಹಿರಿಯ ನೈರ್ಮಲ್ಯ ನಿರೀಕ್ಷಕನಾಗಿದ್ದರು. ಕಾರ್ಯನಿರ್ವಹಿಸುವ ವೇಳೆಯಲ್ಲಿ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿದ್ದ ಹಿನ್ನಲೆಯಲ್ಲಿ 2013ರಲ್ಲಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಆಗಿನ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಜಿ. ಶೇಟ್ ಈ ಬಗ್ಗೆ ಸವಿವರವಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಈ ಭ್ರಷ್ಟಾಚಾರ ಪ್ರಕರಣ ಆಲಿಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ಬಿಬಿ ಜಕಾತಿ ತೀರ್ಪು ಪ್ರಕಟಿಸಿ ಆರೋಪಿ ಶಿವಲಿಂಗ ಕೊಂಡಗುಳಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ ದಂಡ ವಿಧಿಸಿ ತೀರ್ಪು ನೀಡಿದೆ.

RELATED ARTICLES

Related Articles

TRENDING ARTICLES