ರಿಲೀಸ್ ಆದ ಎಲ್ಲಾ ಥಿಯೇಟರ್ಗಳಲ್ಲೂ ಅಬ್ಬರಿಸಿ ಬೊಬ್ಬಿರಿಯುತ್ತಿರೋ ಕಾಂತಾರ ಚಿತ್ರಕ್ಕೆ ಇಡೀ ಸಿನಿದುನಿಯಾನೆ ಶೇಕ್ ಆಗಿದೆ. ಕರಾವಳಿಯ ದೈವ ಕಂಡು ಚಿತ್ರಪ್ರೇಮಿಗಳು ಮಂತ್ರಮುಗ್ಧವಾಗಿದ್ದಾರೆ. ರೋಮಾಂಚನ ಎನಿಸೋ ಕರಾವಳಿ ಕೋಲಗಳ ಭಕ್ತಿಯ ಭಾವಕ್ಕೆ ಚಿತ್ರರಂಗ ಥಂಡಾ ಹೊಡೆದಿದೆ. ಯೆಸ್.. ಇದಕ್ಕೆ ಸಾಕ್ಷಿಯಾಗಿ ಥಿಯೇಟರ್ನಲ್ಲಿ ಮತ್ತೊಂದು ವಿಚಿತ್ರ ಘಟನೆ ನಡೆದಿದೆ. ಏನ್ ವಿಷ್ಯ ಅಂತೀರಾ..? ನೀವೇ ಓದಿ.
- ಕ್ಲೈಮ್ಯಾಕ್ಸ್ ನೋಡ್ತಿದ್ದಂತೆ ವಿಚಿತ್ರವಾಗಿ ವರ್ತಿಸಿದ ವ್ಯಕ್ತಿ..!
ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿರೋ ಬ್ಲಾಕ್ಬಸ್ಟರ್ ಸಿನಿಮಾ ಕಾಂತಾರ. ರಿಲೀಸ್ ಆದ ಎಲ್ಲಾ ಥಿಯೇಟರ್ಗಳಲ್ಲೂ ಹೌಸ್ಫುಲ್ ಪ್ರದರ್ಶನ ಕಂಡು ಕೋಟಿ ಕೋಟಿ ಕಲೆಕ್ಷನ್ ಕೊಳ್ಳೆ ಹೊಡೆದ ಅಪರೂಪದ ಸಿನಿಮಾ. ಹೊಂಬಾಳೆ ಬ್ಯಾನರ್ನಲ್ಲಿ ಮೋಡಿ ಮಾಡಿದ ಕಾಂತಾರ ಸ್ಯಾಂಡಲ್ವುಡ್ ಮಾತ್ರವಲ್ಲದೇ ಹಿಂದಿ, ತಮಿಳು, ಮಲಯಾಳಂ ಭಾಷೆಗೂ ಡಬ್ ಆಗಿ ಅಬ್ಬರಿಸೋಕೆ ತುದಿಗಾಲಲ್ಲಿ ನಿಂತಿರೋ ಸೂಪರ್ ಹಿಟ್ ಸಿನಿಮಾ.
ಕಾಂತಾರ. ಇಂದು ಇದು ಕೇವಲ ಸಿನಿಮಾ ಆಗಿ ಉಳಿದಿಲ್ಲ. ಕಲೆ, ಸಂಸ್ಕೃತಿ, ಆಚರಣೆ, ಸಂಪ್ರದಾಯಗಳ ಸಾಂಕೇತಿಕವಾಗಿ ಸದ್ದು ಮಾಡ್ತಿದೆ. ಕರಾವಳಿ ಮಣ್ಣಿನ ದೇಸಿ ಧಾರ್ಮಿಕ ಸಂಪ್ರದಾಯಗಳು ಇಡೀ ಚಿತ್ರರಸಿಕರ ನಿದ್ದೆಗೆಡಿಸಿದೆ. ಕೇವಲ ಕನ್ನಡದಲ್ಲಿ ತೆರೆ ಕಂಡಿದ್ದ ಕಾಂತಾರ ಇಂದು ಪರಭಾಷೆಗಳಿಗೆ ಡಬ್ ಆಗ್ತಿದೆ. ಈ ನಡುವೆ ಥಿಯೇಟರ್ನಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಕ್ಲೈಮ್ಯಾಕ್ಸ್ ನೋಡ್ತಿದ್ದಂತೆ ವ್ಯಕ್ತಿಯೊಬ್ಬನ ಮೈಮೇಲೆ ದೈವದ ಆಹಾವನೆಯಾಗಿದೆ.
- ಹಿಂದೆಯೂ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದ ಮಂಗಳೂರು
- ಪರಭಾಷಿಗರ ನಿದ್ದೆಗೆಡಿಸಿದ ರೋಚಕ ಕಹಾನಿ ಕಾಂತಾರ..!
ಇಂದು ಕನ್ನಡ ಚಿತ್ರರಂಗದಲ್ಲಿ ಶಟ್ರಿಗೆ ಶುಭಕಾಲ ಶುರುವಾಗಿದೆ. ರಿಷಬ್, ರಕ್ಷಿತ್, ರಾಜ್ ಬಿ. ಶೆಟ್ಟಿ ಸಿನಿಮಾಗಳು ಬಾಕ್ಸ್ಆಫೀಸ್ ಲೂಟಿ ಮಾಡ್ತಿವೆ. ಇವ್ರ ಕ್ರಿಯೇಟಿವಿಟಿಗೆ ಪ್ರೇಕ್ಷಕರು ಶಹಬ್ಬಾಸ್ ಅಂತಿದ್ದಾರೆ. ಇದೀಗ ಕಾಂತಾರ ಸರದಿ. ರಿಷಬ್ ಅಭಿನಯಕ್ಕೆ ಚಿತ್ರರಸಿಕರು ಮಾರು ಹೋಗಿದ್ದಾರೆ.
ಯೆಸ್.. ಪ್ರೇಕ್ಷಕರು ಕ್ಲೈಮ್ಯಾಕ್ಸ್ ಸೀನ್ ನೋಡಿ ಸ್ಟನ್ ಆಗಿದ್ದಾರೆ. ಇದೀಗ ಥಿಯೇಟರ್ನಲ್ಲಿ ಎಲ್ರೂ ಮೌನವಾಗಿ ಸಿನಿಮಾ ಕ್ಲೈಮ್ಯಾಕ್ಸ್ ಸೀನ್ ನೋಡುವಾಗ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಕಿರುಚಾಡಿದ್ದಾನೆ. ಮೈ ಮೇಲೆ ದೇವರು ಬಂದಂತೆ ವಿಚಿತ್ರವಾಗಿ ವರ್ತಿಸಿದ್ದಾನೆ. ಇದ್ದಕ್ಕಿದ್ದಂತೆ ಹೀಗೆ ಕೂಗಾಡಿದ್ದನ್ನು ಕಂಡು ಎಲ್ರು ಬೆಚ್ಚಿ ಬಿದ್ದಿದ್ದಾರೆ. ಈ ಹಿಂದೆಯೋ ಮಂಗಳೂರಿನಲ್ಲಿ ಇದೇ ರೀತಿಯ ಪ್ರಸಂಗ ನಡೆದಿತ್ತು.
ಮಂಗಳೂರಿನಲ್ಲಿ ಈ ಚಿತ್ರದಲ್ಲಿನ ದೈವಕ್ಕೆ ಅಪಾರ ಭಕ್ತಿ ಇದೆ. ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ಹೀಗೆ ಅನೇಕ ದೈವರಾಧನೆಗೆ ಕರಾವಳಿ ಹೆಸರಾಗಿದೆ. ಹೆಚ್ಚಾಗಿ ನಂಬುವ ಭಕ್ತರಿಗೆ ಸಿನಿಮಾ ನೋಡುವಾಗ ಈ ರೀತಿ ದೈವ ಆಹಾವನೆಯಾಗೋದು ಸಾಮಾನ್ಯ ಅಂತಾರೆ ಸ್ಥಳಿಯರು. ಎನಿವೇ, ಕಾಂತಾರ ಪ್ರಕೃತಿ ಹಾಗೂ ಮನುಷ್ಯನ ಸಂಘರ್ಷಗಳಿಗೆ ಹೊಸ ಪರಿಕಲ್ಪನೆ ಕೊಟ್ಟಿದ್ದು ವಿಶೇಷ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ