ಹಾಸನ: ಮದುವೆಯಾಗಿದ್ದ ಯುವತಿಗೆ ಮೆಸೇಜ್ ಮಾಡಿದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರೀನಿವಾಸಪುರದಲ್ಲಿ ನಡೆದಿದೆ.
ಮೃತ ದುರ್ದೈವಿ ಗಂಗಾಧರ ಊಪಿನಹಳ್ಳಿ ಗ್ರಾಮದವನಾಗಿದ್ದು, ಮದುವೆಯಾಗಿದ್ದ ಯುವತಿಗೆ ಮೆಸೇಜ್ ಮಾಡಿದ ವಿಚಾರಕ್ಕೆ ಈ ಗಲಾಟೆ ಆರಂಭವಾಗಿ, ಇಂದು ಗಂಗಾಧರನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಯುವತಿ ಕಡೆಯವರು ಹೋಗಿದ್ದರು.
ಈ ವೇಳೆ ಗಂಗಾಧರ್ ಮೇಲೆ ತೀವ್ರ ದೊಣ್ಣೆಗಳಿಂದ ಹಲ್ಲೆಯಾದ ಹಿನ್ನಲೆಯಲ್ಲಿ ತನ್ನ ಅಣ್ಣ ಮೋಹನ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಗಂಗಾಧರನನ್ನು ಕರೆದುಕೊಂಡು ಬಂದು ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಗೆ ಸಹೋದರ್ ಮೋಹನ್ ದಾಖಲಿಸಿದ್ದು, ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗಂಗಾಧರ ಸಾವು ಅನುಭವಿಸಿದ್ದಾನೆ.
ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಚನ್ನರಾಯಪಟ್ಟಣ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.