Tuesday, November 5, 2024

ಅಧಿಕಾರಿಗಳಿಗೆ ಕಿಮ್ಮನೆ ರತ್ನಾಕರ್ ತರಾಟೆ

ತೀರ್ಥಹಳ್ಳಿ : ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರತ್ನಾಕರ್ ಶಿವಮೊಗ್ಗ ಜಿಲ್ಲೆಯ​​​ ಮೇಲಿನ ಕುರುವಳ್ಳಿ ಕಲ್ಲು ಕುಟಿಕರ ಸಹಕಾರ ಸಂಘದ ಸಭೆ ನಡೆಸಿ, ಬಳಿಕ ಬಂಡೆ ಕಾರ್ಮಿಕರೊಂದಿಗೆ ವೀಕ್ಷಿಸಲು ಬಂಡೆ ಪ್ರದೇಶ ವೀಕ್ಷಣೆಗೆ ಬಂದಿದ್ರು. ಅದೇ ಸಮಯದಲ್ಲಿ ಇಲಾಖೆ ಅಧಿಕಾರಿಗಳಾದ ಅವಿನಾಶ್, ವಿಂಧ್ಯಾ ಬಂದಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಗಳವಾರ ರಾತ್ರಿ ಬಂಡೆ ಪ್ರದೇಶಕ್ಕೆ ಅಧಿಕಾರಿಗಳು ಟ್ರಂಚ್ ಹೊಡೆದು, ಸ್ಥಳೀಯರಿಗೆ ಕಿರುಕುಳ ಕೊಟ್ಟಿದ್ರಂತೆ. ಈ ವಿಚಾರವಾಗಿ ಅಧಿಕಾರಿಗಳ ವಿರುದ್ಧ ಕಿಮ್ಮನೆ ಆಕ್ರೋಶ ಹೊರಹಾಕಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು ಕಾನೂನಿನಂತೆ ಕೆಲಸ ಮಾಡುತ್ತಿದ್ದೇವೆ ಎಂದ್ರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆಯಿತು. ತೀರ್ಥಹಳ್ಳಿ ಠಾಣೆ ಪೊಲೀಸರು ಬಂದು ವಾತಾವರಣ ತಿಳಿಗೊಳಿಸಿದ್ರು.

RELATED ARTICLES

Related Articles

TRENDING ARTICLES