Saturday, November 23, 2024

ವಿಜಯನಗರದಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ ಯಶಸ್ವಿ

ವಿಜಯನಗರ : ದಲಿತರ ಮನೆಯಲ್ಲಿ ಉಪಹಾರ ಸವಿಯುತ್ತಿರುವ ನಾಡದೊರೆ, ಜನಸಂಕಲ್ಪ ಯಾತ್ರೆಯ ಹೆಸರಿನಲ್ಲಿ 2023ರ ವಿಧಾನ ಸಭೆ ಚುನಾವಣೆಯ ರಣಕಹಳೆ, ರೋಷಾವೇಶದ ಭಾಷಣ ಮಾಡಿದ ಸಚಿವರು, ವಿಜಯನಗರ ಜಿಲ್ಲೆಯ ಪ್ರತಿಯಾಗಿ 10 ಕ್ಷೇತ್ರಗಳಲ್ಲಿ ಬಿಜೆಪಿ ಬಾವುಟ ಹಾರಿಸಬೇಕು ಎಂದ ರಾಜಾಹುಲಿ,ಈ ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ವಿಜಯನಗರ ಜಿಲ್ಲೆ.

ರಾಜ್ಯದ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವು ತಿಂಗಳುಗಳಷ್ಟೇ ಬಾಕಿ ಇರೋ ಬೆನ್ನಲ್ಲೇ, ಕಮಲ ಪಾಳೆಯವು ಚುನಾವಣೆ ಪ್ರಚಾರದ ಅಖಾಡಕ್ಕೆ ಇಳಿದಿದೆ. ಹೊಸಪೇಟೆಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯೇ ಅದಕ್ಕೆ ಸಾಕ್ಷಿಯಾಗಿದೆ. ಬೆಳಗ್ಗೆ ಕಮಲಾಪುರದ ದಲಿತ ಮಹಿಳೆ ಯಲ್ಲಮ್ಮ ಕೊಲ್ಲಾರಪ್ಪ ಮನೆಯಲ್ಲಿ ಉಪ್ಪಿಟ್ಟು, ಒಗ್ಗರಣೆ ಮೆಣಸಿನಕಾಯಿ ರೆಡಿ ಮಾಡಿದ್ರು. ಒಗ್ಗರಣೆ ಮಿರ್ಚಿ ಸವಿದ ಸಿಎಂ ಬಸವರಾಜ್, ಬೊಮ್ಮಾಯಿ ಬಳಿಕ ಟೀ ಕುಡಿದ್ರು.ಯಡಿಯೂರಪ್ಪ ಕೂಡ ಸಾಥ್ ನೀಡಿದ್ರು. ಇದಕ್ಕೂ ಮುನ್ನ ಮನೆಗೆ ಬಂದ ಸಿಎಂಗೆ ಆರತಿ ಮಾಡಿದ ದಲಿತ ಮಹಿಳೆಯ ಆರತಿ ತಟ್ಟೆಗೆ 500 ರೂ. ಗರಿ, ಗರಿ ನೋಟು ಹಾಕಿದ್ರು.

ಬಳಿಕ ಕಮಲಾಪುರದಿಂದ ಹೊಸಪೇಟೆಗೆ ಆಗಮಿಸಿದ ಸಿಎಂ, ಏಳೂ ಕೇರಿಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿ, ಮದಕರಿ ನಾಯಕ ವೃತ್ತದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ರು. ಬಳಿಕ ವೇದಿಕೆಗೆ ಆಗಮಿಸಿದ ನಾಯಕರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. SC/ST ಮೀಸಲಾತಿ ಟ್ರಂಪ್ ಕಾರ್ಡ್ ಬಳಸಿದ ಸಚಿವ ಆನಂದ್ ಸಿಂಗ್, ಶ್ರೀರಾಮುಲು, ವೇದಿಕೆಯ ಮೇಲಿದ್ದ ಗಣ್ಯರನ್ನು ಹಾಡಿ ಹೊಗಳಿದ ಬಳಿಕ, ಬಳ್ಳಾರಿ- ವಿಜಯನಗರ ಅವಳಿ ಜಿಲ್ಲೆಗಳಲ್ಲಿ 10 ಕ್ಷೇತ್ರದಲ್ಲಿ BJP ಬಾವುಟ ಹಾರಿಸುತ್ತೇವೆ ಅಂತ ಹೇಳಿದ್ರು.ಅಲ್ಲದೆ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಜನ ಸಂಕಲ್ಪ ಯಾತ್ರೆಯೂದ್ದಕ್ಕೂ ಹಾಲಿ, ಮಾಜಿ ಸಿಎಂಗಳು ಸೇರಿದಂತೆ ವೇದಿಕೆಯ ಮೇಲಿದ್ದ ಗಣ್ಯರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಕಾಂಗ್ರೆಸ್ SC/ST ಗಳಿಗೆ ಏನೂ ಸಹ ಮಾಡಲಿಲ್ಲ, ಸರ್ವ ಪಕ್ಷದ ಸಭೆಯಲ್ಲಿ ಒಪ್ಪಿಗೆ ಕೊಟ್ಟು, ಹೊರಗಡೆ ಬಂದು ನಾಟಕ ಮಾಡ್ತಾರೆ ಅಂತ ಕಿಡಿ ಕಾರಿದರು.Bjp

ಬಸವರಾಜ್ ಹರನಹಳ್ಳಿ ಪವರ್ ಟಿವಿ, ಬಳ್ಳಾರಿ

RELATED ARTICLES

Related Articles

TRENDING ARTICLES