ಕಾರವಾರ: ಶಾಸಕ ಸುನಿಲ್ ನಾಯ್ಕ್ ಅವರ ಮನೆಗೆ ಭೇಟಿ ವೇಳೆ ಯಕ್ಷಗಾನ ಬಯಲಾಟ ಮುಗಿದ ಬಳಿಕ ಸ್ವತಃ ಯಕ್ಷಗಾನ ವೇಷ ಹಾಕಿಕೊಂಡು ಸಚಿವ ಡಾ.ಕೆ ಸುಧಾಕರ್ ಗಮನಸೆಳೆದರು.
ರಾತ್ರಿ ಶಾಸಕ ಸುನೀಲ್ ನಾಯ್ಕ್ ಅವರ ನಿವಾಸದಲ್ಲಿ ಯಕ್ಷಗಾನ ಬಯಲಾಟವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಸಚಿವರು, ಸಚಿವರು ಯಕ್ಷಗಾನದ ವಸ್ತ್ರ, ಪಗಡೆ ಹಾಗೂ ಆಭರಣ ತೊಟ್ಟು ಯಕ್ಷಗಾನ ವೇಷಧಾರಿಯಾಗಿ ಸಂಭ್ರಮಿಸಿದರು.
ಈ ಕುರಿತು ಟ್ವೀಟರ್ನಲ್ಲಿ ಹಂಚಿಕೊಂಡ ಡಾ.ಕೆ ಸುಧಾಕರ್ ಅವರು, ಯಕ್ಷಗಾನ ನಮ್ಮ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಹೆಗ್ಗುರುತು, ತುಳುನಾಡಿನ ಜನಜೀವನದ ಅವಿಭಾಜ್ಯ ಅಂಗ. ಕರಾವಳಿಗೆ ಭೇಟಿ ನೀಡಿದ ಮೇಲೆ ಯಕ್ಷಗಾನ ನೋಡದೆ ಹೋದರೆ ಆ ಪ್ರವಾಸ ಸಂಪೂರ್ಣವಾಗುವುದಿಲ್ಲ.
ನೆನ್ನೆ ರಾತ್ರಿ ಭಟ್ಕಳ ಶಾಸಕ ಸುನಿಲ್ ನಾಯ್ಕ್ ಅವರ ಮನೆಯಲ್ಲಿ ಯಕ್ಷಗಾನ ವೀಕ್ಷಿಸಿ ದೈವಿಕಲೆಯ ವೇಷ ಹಾಕುವ ಅವಕಾಶ ದೊರೆತದ್ದು ನನ್ನ ಪುಣ್ಯ ಎಂದು ಹೇಳಿದರು.