Thursday, December 19, 2024

RSS ಪ್ರಮುಖರ ಹಲ್ಲೆ ಕೇಸ್​; 20 ಮುಸ್ಲಿಂ ಯುವಕರ ಬಂಧನ.!

ಹಾವೇರಿ; ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಆರ್​ಎಸ್​ಎಸ್ ಪ್ರಮುಖರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಜನರನ್ನ ಬಂಧಿಸಲಾಗಿದೆ ಎಂದು ರಟ್ಟಿಹಳ್ಳಿಯಲ್ಲಿ ಪೊಲೀಸ್​ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.

ರಟ್ಟಿಹಳ್ಳಿಯಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ರಾತ್ರಿ ಪಥಸಂಚಲನ ವಿಚಾರಕ್ಕೆ ಹೋಗುತ್ತಿದ್ದರು ಈ ವೇಳೆ ಕೆಲವು ಮುಸ್ಲಿಂ ಯುವಕರು ಅವರ ಜೊತೆ ಗಲಾಟೆಗೆ ಇಳಿದಿದ್ದಾರೆ. ಒಬ್ಬರಿಗೆ ತಲೆಗೆ ಪೆಟ್ಟು ಬಿದ್ದಿದೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಈ ಬಗ್ಗೆ ರಟ್ಟಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಿದ್ದೇವೆ. ಬ್ಯಾನರ್, ಬಂಟಿಂಗ್ಸ್ ತೆರವು ಕಾರ್ಯಾಚರಣೆ ಮಾಡುತ್ತಿದ್ದೇವೆ. ಪರಿಸ್ಥಿತಿ ಸದ್ಯಕ್ಕೆ ಶಾಂತಿಯುತವಾಗಿದೆ. ನಾಳೆಯವರೆಗೆ ರಟ್ಟಿಹಳ್ಳಿಯಲ್ಲಿ 144 ನಿಷೇದಾಜ್ಞೆ ಜಾರಿಗೆ ತಹಶಿಲ್ದಾರ ಆದೇಶ ಹೊರಡಿಸುತ್ತಾರೆ ಎಂದು ಎಸ್​ಪಿ ಹೇಳಿದರು.

RELATED ARTICLES

Related Articles

TRENDING ARTICLES