ಕಲಬುರಗಿ : ಅಲ್ಪಸಂಖ್ಯಾತ ಮೀಸಲಾತಿಯಿಂದ ಮುಸಲ್ಮಾನರನ್ನ ತೆಗೆಯುವ ವಿಚಾರವಾಗಿ ಕುಲಶಾಸ್ತ್ರ ಅಧ್ಯಯನ ವರದಿ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಲಬುರಗಿಯಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಟಿ/ಎಸ್ಸಿಗೆ ಮೀಸಲಾತಿ ಹೆಚ್ಚಳ ಸಂವಿಧಾನ ಬದ್ದನಾ? ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಬೇಕಿತ್ತು, ಸಭೆ ಹೊರಗಡೆ ಈ ರೀತಿ ಗೊಂದಲ ಮೂಡಿಸವ ಚರ್ಚೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದಲ್ಲದೇ, 75 ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷ ಯಾಕೆ ಮೀಸಲಾತಿ ಹೆಚ್ಚಳ ಮಾಡಿಲ್ಲ, ದಲಿತರು/ಅಲ್ಪಸಂಖ್ಯಾತರನ್ನ ಕಾಂಗ್ರೆಸ್ ಓಟ್‌ಬ್ಯಾಂಕ್ ಮಾಡಿಕೊಂಡಿದೆ. ಎಸ್ಸಿ/ಎಸ್ಟಿ ಜನರಲ್ಲಿ ಗೊಂದಲ ಉಂಟು ಮಾಡುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಚುನಾವಣೆಗೋಸ್ಕರ ಮೀಸಲಾತಿ ಹೆಚ್ಚಳ ಆರೋಪವನ್ನ ಈಶ್ವರಪ್ಪ ತಳ್ಳಿಹಾಕಿದರು.