Monday, November 25, 2024

ಆಸ್ಕರ್ ಸ್ಟೇಜ್ ಮೇಲೆ ಚರಣ್, Jr. NTR ನಾಟು ನಾಟು

ಮ್ಯಾನ್​ ಆಫ್​ ಮಲ್ಟಿ ಡ್ಯಾಲೆಂಟೆಡ್​​ ರಾಜಮೌಳಿಯ ಆರ್​ಆರ್​ಆರ್ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ. ಸಿನಿಮಾ ಕಥೆ ಮರೆಯಬಹುದು ಆದ್ರೆ, ನಾಟು ನಾಟು ಸಾಂಗ್​ ಮಾತ್ರ ಮರೆಯೋಕೆ ಆಗಲ್ಲ. ಯೆಸ್​​.. ರಾಮ್​ ಚರಣ್​​ ಹಾಗೂ ಎನ್​ಟಿಆರ್​​ ತಾಳ ಮೇಳ ಕುಣಿತದ ಸಪ್ಪಳಕ್ಕೆ ಸಿನಿಲೋಕವೇ ಥಂಡಾ ಹೊಡೆದಿತ್ತು. ಇದೀಗ ಈ ಜೋಡಿ ಅದ್ದೂರಿ ವೇದಿಕೆಯ ಮೇಲೆ ರಂಜಿಸೋಕೆ ಸಜ್ಜಾಗ್ತಿದ್ದಾರೆ. ಯೆಸ್​​​.. ಎಲ್ಲಿ..? ಯಾವಾಗ ಅಂತೀರಾ..? ನೀವೇ ಓದಿ.

  • ಹುಚ್ಚೆದ್ದು  ಕುಣಿದು ರಂಜಿಸೋಕೆ  ಹಿಟ್​ ಕಾಂಬೋ ಸಜ್ಜು

ಸಿನಿಸಂತ, ಸಿನಿಮಾಂತ್ರಿಕ ರಾಜಮೌಳಿ ಸಿನಿಮಾಗಳಂದ್ರೆ ಅಲ್ಲೊಂದು ದೃಶ್ಯವೈಭವದ ಹೊಸ ಜಗತ್ತು ತೆರೆದುಕೊಳ್ಳುತ್ತೆ. ಮಗಧೀರ, ಬಾಹುಬಲಿ, ಆರ್​ಆರ್​ಆರ್​ ಚಿತ್ರಗಳೇ ಈ ಮಹಾವೈಭವಕ್ಕೆ ಸಾಕ್ಷಿ. ಕಣ್ಮನ ತಣಿಸುವ ಪಕ್ಕಾ ವಿಶ್ಯುಯೆಲ್​ ಟ್ರೀಟ್​​ ಸಿನಿಮಾಗಳ ಸರದಾರ ರಾಜಮೌಳಿ.

ಆರ್​ಆರ್​ಆರ್​​ ಸಿನಿಮಾ ಮುಖಾಂತರ ಸಂಚಲನ ಮೂಡಿಸಿದ್ದ ಹಿಟ್​ ಕಾಂಬೋ ರಾಮ್​ಚರಣ್​, ಎನ್​ಟಿಆರ್​ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ್ರು. ಈ ಚಿತ್ರದ ನಾಟು ನಾಟು ಸ್ಟೆಪ್ಸ್​​ ಕುಂತಲ್ಲೇ ಮೈ ಕುಣಿಸುವಂತೆ ಮಾಡಿತ್ತು. ಇದೀಗ ಈ ಹಾಡು ಆಸ್ಕರ್​ ಅಂಗಳದಲ್ಲೂ ಗರ್ಜಿಸಿಲಿದೆಯಂತೆ. ಚಿತ್ರರಸಿಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ನಾಟು ನಾಟು ಸಾಂಗ್​​ ಆಸ್ಕರ್​ ಅವಾರ್ಡ್​ ಫಂಕ್ಷನ್​ನಲ್ಲಿ ಮೊಳಗಲಿದೆ.

  • ಹಾಲಿವುಡ್​ ಅಂಗಳದಲ್ಲಿ ಅಚ್ಚರಿ ಮೂಡಿಸಿದ್ದ ಆರ್​ಆರ್​ಆರ್
  • ರಾಜಮೌಳಿ ಅಂಡ್​ ಟೀಮ್​ಗೆ ಕೈ ತಪ್ಪಿದ ​ಆಸ್ಕರ್​​​​​ ಪ್ರಶಸ್ತಿ..!

ವರ್ಲ್ಡ್​​ ವೈಡ್​​​ ಆರ್​ಆರ್​ಆರ್​ ಸಿನಿಮಾ 1100 ಕೋಟಿಗು ಅಧಿಕ ಕೆಲೆಕ್ಷನ್​ ಬಾಚಿತು. ದೋಸ್ತಿಗಳಾಗಿ ಮಿಂಚಿದ್ದ ರಾಮ್​ಚರಣ್​​, ಎನ್​ಟಿಆರ್​ ಸ್ನೇಹದ ಸೆಳೆತ ಸಿನಿರಸಿಕರ ಹೃದಯ ಗೆದ್ದಿತ್ತು. ಸ್ವಾತಂತ್ರ್ಯದ ಸೆಲೆಯನ್ನು ಸಖತ್​ ಆಗಿ ತೋರಿಸಿದ್ದ ಚಿತ್ರದಲ್ಲಿ ಎಲ್ಲಾ ಹಾಡುಗಳು ಹಿಟ್ ಆಗಿದ್ವು. ಇದೀಗ ಈ ಚಿತ್ರದ ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡುವಂತೆ ಆಸ್ಕರ್​ ಟೀಮ್​ ಆಹ್ವಾನ ನೀಡಲಾಗಿದೆಯಂತೆ. ಇದಕ್ಕಾಗಿ ರಾಮ್​ಚರಣ್​​, ಎನ್​ಟಿಆರ್​​ ಮತ್ತೊಮ್ಮೆ ತಯಾರಿ ನಡೆಸ್ತಿದ್ದಾರೆ ಎನ್ನಲಾಗ್ತಿದೆ.

​​​​ಯೆಸ್​​..  ಈ ಬಾರಿ ಭಾರತದಿಂದ ಆಸ್ಕರ್​​ಗೆ ಆರ್​ಆರ್​ಆರ್​ ನಾಮಿನೇಟ್​ ಆಗಿಲ್ಲ. ಆದ್ರೂ FYC ವಿಧಾನದ ಮೂಲಕ ಆರ್​ಆರ್​ಆರ್​ ಚಿತ್ರವನ್ನು ಆಸ್ಕರ್​ ನಾಮಿನೇಷನ್​​ ಕಳುಹಿಸಿಕೊಟ್ಟಿದೆ. ಈ ನಡುವೆ, ಆಸ್ಕರ್​ ಅದ್ಧೂರಿ ವೇದಿಕೆ ಮೇಲೆ ನಾಟು ನಾಟು ಸಾಂಗ್​​ಗೆ ಸೂಪರ್​ ಸ್ಟಾರ್ಸ್​​ ಡ್ಯಾನ್ಸ್​ ಮಾಡ್ತಾರೆ ಎನ್ನಲಾಗ್ತಿದೆ.

ಗುಜರಾತಿ ಸಿನಿಮಾ ಚೆಲ್ಲೋ ಶೋ ಭಾರತದಿಂದ ಅದಿಕೃತವಾಗಿ ಆಸ್ಕರ್​​ಗೆ  ನಾಮಿನೇಟ್​​​ ಆಗಿದ್ದು, ವಿಶ್ವದ ಹಿಟ್​ ಸಿನಿಮಾಗಳ ಜತೆ ಪೈಪೋಟಿ ನಡೆಸಲಿದೆ. ವಿಶ್ವದ ಶ್ರೇಷ್ಟ ಜ್ಯುರಿಗಳು, ವಿಶ್ವ ಕಂಡ ಅದ್ಭುತ ಕಲಾವಿದ್ರು, ನಟ, ನಟಿಯರ ಎದ್ರು ನಾಟು ನಾಟು ಹಾಡು ಮೊಳಗಲಿದೆಯಂತೆ. ಅಂತೂ ಇದು ನಿಜವೇ ಆದ್ರೆ ಭಾರತೀಯ ಚಿತ್ರರಂಗ ಹೆಮ್ಮೆ ಪಡಬೇಕಾದ ವಿಷ್ಯ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ  

RELATED ARTICLES

Related Articles

TRENDING ARTICLES