ಹಾವೇರಿ : ರಾಜ್ಯದಲ್ಲಿ ಎರಡು ತಂಡವಾಗಿ ಜನ ಸಂಕಲ್ಪ ಯಾತ್ರೆ ಮಾಡ್ತಿದಿವಿ ಎಂದು ಹಾವೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ ಹೇಳಿದರು.
ರಾಜ್ಯದಲ್ಲಿ ಎರಡು ತಂಡವಾಗಿ ಜನ ಸಂಕಲ್ಪ ಯಾತ್ರೆ ಮಾಡ್ತಿದಿವಿ. ಈಗಾಗಲೇ ಎರಡು ಸಮುದಾಯದ ಬೇಡಿಕೆ ಈಡೇರಿಸುವ ಕೆಲಸ ಸರಕಾರ ಮಾಡಿದೆ. ಮುಂದಕ್ಕೆ ಹತ್ತಾರು ಬೇಡಿಕೆ ಇದೆ ಆ ಕೇಲಸವನ್ನ ಸರಕಾರ ಮಾಡುತ್ತದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದವರು, ಅಹಿಂದ ಚಳುವಳಿ ಮಾಡಿ ಹಿಂದುಳಿದ ವರ್ಗಗಳಿಗೆ ನ್ಯಾಯವನ್ನೇ ಕೊಡದೆ ಇರುವಂತವರು. ಆ ಸಂದರ್ಭದಲ್ಲಿ ಯಾಕೆ ಮೀಸಲಾತಿ ಕೊಡಲಿಲ್ಲ. ಸಿಎಂ ಆಗಿ ಐದು ವರ್ಷ ಅಧಿಕಾರದಲ್ಲಿದ್ರು ಆ ಭೀಕ್ಷೆಯಡಿಯಲ್ಲಿ, ಆ ಕೋಟಾದಡಿಯಲ್ಲಿ ಸಿಎಂ ಆದ್ರು ನ್ಯಾಯ ಕೊಡುವ ಕೇಲಸ ಮಾಡದೆ ಕೊಟ್ಟಾಗ ಅಸಮಾಧಾನ ವ್ಯಕ್ತಪಡಿಸುವುದು ಯಾವ ನ್ಯಾಯ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು, ಅವರ ಕಾಲಘಟ್ಟದಲ್ಲಿ ಕೊಡುವ ಯೋಗ್ಯತೆ ಇರಲಿಲ್ಲ ಅವರಿಗೆ. ಇವರ ಕಾಲದಲ್ಲಿ ಏನು ತೀರ್ಮಾನ ತೆಗೆದುಕೊಳ್ಳಲಾಗದ ಸಿಎಂ ಆಗಿದ್ರು. ಅದನ್ನ ಮುಚ್ಚಿ ಹಾಕಲು ಒಂದು ಆಯೋಗ ಮಾಡಿ ಅಲ್ಲಿಗೆ ಮುಚ್ಚಿ ಹಾಕಿದ್ರು. ವೀರಶೈವ ಲಿಂಗಾಯತ ಸಮಾಜವನ್ನು ಒಡೆದಾಳಿದ್ರು. ಇದನ್ನ ಬಿಟ್ಟು ಏನು ಮಾಡಿದ್ದಾರೆ ಒಳ್ಳೆಯದು. ನಾವು ಮಾಡಿದೆವೆ ನಾವು ಕ್ರೇಡಿಟ್ ತಗಳ್ತಿವಿ. ಇವರಿಗೆ ಯಾವ ನೈತಿಕತೆ ಇದೆ.
ಕೇಂದ್ರ ಸರಕಾರ ಕೊಟ್ಟ ಅನ್ನಭಾಗ್ಯವನ್ನ ನಾವು ಕೊಟ್ಟಿದ್ದೇವೆ. ಅಂತಾ ಪಟಾ ಹಾಕಿಕೊಂಡು ತಿರಗಿದ್ದಾರೆ ಇವರದ್ದೇನು ಆಣೆ ಇದೆ ಅದರಲ್ಲಿ ಯಾವ ಯೋಗ್ಯತೆ ಇದೆ. ದೇಶದಲ್ಲಿ ಭ್ರಷ್ಟಾಚಾರ ಪ್ರಾರಂಭ ಮಾಡಿದ್ದು ಕಾಂಗ್ರೆಸ್ ಮತ್ತು ತಾಯಿ ರಾಹುಲ್ ಗಾಂಧಿಯ ತಾಥ. ಭ್ರಷ್ಟಾಚಾರದ ಇನ್ನೊಂದು ಹೆಸರೆ ಕಾಂಗ್ರೆಸ್, ಭಯೋತ್ಪಾದನೆಯ ಇನ್ನೊಂದು ಹೆಸರೆ ಕಾಂಗ್ರೆಸ್, ಭ್ರಷ್ಟಾಚಾರದ ಒಂದು ಫಲಾನುಭವಿ ರಾಹುಲ್ ಗಾಂಧಿ ಅದಕ್ಕೊಸ್ಕರ ಬೇಲ್ ಮೇಲಿದ್ದಾರೆ ಎಂದರು.