ಮೈಸೂರು : ರಾಜ್ಯದಲ್ಲಿ ಕಳೆದ ಕೆಲ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಜಮೀನುಗಳು ಜಲಾವೃತವಾಗಿದ್ವು, ಇದ್ರಿಂದಾಗಿ ನದಿಯಲ್ಲಿರುವ ಮೊಸಳೆಗಳು ಸಣ್ಣ ಹಳ್ಳ, ಕೊಳ್ಳಕ್ಕೆ ಬಂದು ಸೇರಿಕೊಂಡಿವೆ.
ಇವುಗಳು ರೈತರ ಜಮೀನಿನಲ್ಲಿ ಪ್ರತ್ಯಕ್ಷವಾಗಿದ್ದು, ರೈತರು ಹೌಹಾರಿದ್ದಾರೆ. ಕೊಡಗಿನ ಪೊನ್ನಂಪೇಟೆ ತಾಲೂಕಿನ ಬಾಳಾಜಿ ಗ್ರಾಮದಲ್ಲಿ ಹರೀಶ್ ಎಂಬುವವರ ಗದ್ದೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಸುಮಾರು 3 ವರ್ಷ ಪ್ರಾಯದ ಮೊಸಳೆ ಎಂದು ತಿಳಿದು ಬಂದಿದೆ.
ಇನ್ನು, ಅರಣ್ಯ ಇಲಾಖೆ ಸಿಬ್ಬಂದಿಯು ಮೊಸಳೆಯನ್ನು ಸೆರೆ ಹಿಡಿದಿದ್ದು, ಮೊಸಳೆಯನ್ನು ಕಬಿನಿಗೆ ಬಿಡುವ ಸಾಧ್ಯತೆ ಇದೆ. ಮೊಸಳೆ ಕಂಡು ಜನರು ಹೊಲಗಳಿಗೆ ಹೋಗಲು ಹಿಂದೇಟು ಹಾಕ್ತಿದ್ದಾರೆ.