ಬೆಂಗಳೂರು : ಸರ್ಕಾರ ಒಳ್ಳೆಯ ಉದ್ದೇಶದಿಂದ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರಿಡಲಾಗಿದೆ ಎಂದು ಸಚಿವ ಆರ್ ಅಶೋಕ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಒಳ್ಳೆಯ ಉದ್ದೇಶದಿಂದ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರಿಡಲಾಗಿದೆ. ಮೈಸೂರು ಮಂಡ್ಯ ಭಾಗಕ್ಕೆ ನೀರು ಕೊಟ್ಟವರು ಒಡೆಯರ್. ತಮ್ಮ ಒಡವೆ ಮಾರಿ ಕೆಆರ್‌ಎಸ್ ಕಟ್ಟಿ ಕರ್ಣರಾದರು. ಮೊದಲ ವಿದ್ಯುತ್ ತಯಾರಿಕೆ ಮಾಡಿದ್ದು, ಸೋಪ್, ಸಕ್ಕರೆ ತಯಾರಿಕೆ ಎಲ್ಲವನ್ಮೂ ಕರ್ನಾಟಕಕ್ಕೆ ಕೊಟ್ಟವರು. ಅವರ ಹೆಸರಲ್ಲೇ ಜಂಬೂ ಸವಾರಿ ಆರಂಭವಾಗಿದ್ದು ಎಂದರು.
ಇನ್ನು, ಟಿಪ್ಪು ಕನ್ನಡಿಗ ಅಂತ ಒಪ್ಪಿಯೇ ಇಲ್ಲ. ಆತನ ಆಡಳಿತ ಭಾಷೆ ಪರ್ಶಿಯನ್. ಚಲುವನಾರಾಯಣ ಸ್ವಾಮಿ ದೇವಸ್ಥಾನದ ಬಳಿ ಕೊಗ್ಗೊಲೆ ಮಾಡಿದ್ದಾನೆ. ಹಾಗಾಗಿ ನಮ್ಮ ಆಯ್ಕೆ ಒಡೆಯರ್ ಅನ್ನೋದೇ ಆಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ನು ನೂರು ಟ್ರೈನ್ ತಂದು ಟಿಪ್ಪು, ಲಾಡೆನ್, ಗಜನಿ ಮೊಹಮ್ಮದ್ ಟ್ರೈನ್ ಓಡಿಸಲಿ. ಈ ಹೆಸರನ್ನ ಟ್ರೈನಿಗೆ ಇಟ್ರೆ ಜನರು ಮೆಚ್ತಾರೆ. ಅವರು ಅಧಿಕಾರಕ್ಕೆ ಬಂದಾಗ ಇಟ್ಟುಕೊಳ್ಳಲಿ. ನಮ್ಮ ಬೆಂಬಲ ಒಡೆಯರ್ ಅವರಿಗೆ. ಮುಸ್ಲಿಂ ಎಲ್ಲರೂ ಕೆಟ್ಟವರಲ್ಲ. PFI, ಇತರೆ ಸಂಘಟನೆಗಳನ್ನ ವಿರೋಧಿಸ್ತೇವೆ. ಹಾಗಂತ ಎಲ್ಲರನ್ನೂ ನಾವು ವಿರೋಧಿಸಲ್ಲ. ಒಂದು ವೇಳೆ ಅಲ್ಲಿ ವಾಸ ಮಾಡೋ ಜನ ಮನವಿ ಮಾಡಿದ್ರೆ ಬದಲಾವಣೆ ಮಾಡ್ತೀವಿ ಎಂದರು.