Monday, November 25, 2024

ಜನರ ಭಾವನೆ ಜೊತೆ ನಿಲ್ಲುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ : ನಳೀನ್ ಕುಮಾರ್ ಕಟೀಲ್

ದಾವಣಗೆರೆ : ಭಾರತ್ ಜೋಡೊಗೆ ಠಕರ್ ಕೊಡಲು ಈ ಕೆಲಸ ಮಾಡಿಲ್ಲ ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಡಿಕೆ ಈಡೇರಿಸುವ ಜವಾಬ್ದಾರಿ ಕೆಲಸ ಮಾಡಿರುವ ಸಿಎಂಗೆ ಅಭಿನಂದನೆ ಸಲ್ಲಿಸಿ, ಎಲ್ಲಾ ಜನರ ಭಾವನೆ ಜೊತೆ ನಿಲ್ಲುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ಎರಡು ಸಮುದಾಯಗಳಿಗೆ ನ್ಯಾಯ ಸಿಕ್ಕಿದೆ. ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಲಾಗಿದೆ. ಮುಂದೆ ಸಾಂವಿಧಾನಿಕವಾಗಿ ಕೆಲಸ ಮಾಡಲಾಗುತ್ತದೆ. ಭಾರತ್ ಜೋಡೊಗೆ ಠಕರ್ ಕೊಡಲು ಈ ಕೆಲಸ ಮಾಡಿಲ್ಲ ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಈ ಹಿಂದೆ ಕಮಿಟಿ ಮಾಡಿ ಮುಚ್ಚು ಹಾಕಲಿಕ್ಕೆ ಸಿದ್ದರಾಮಯ್ಯ ನೋಡಿದ್ರು ಅಧ್ಯಯನ ಮಾಡಿ ನಾವು ನಿರ್ಧಾರ ಮಾಡಿದ್ದೇವೆ ಎಂದರು.

ಇನ್ನು,  ಒಡೆಯರ್ ಹೆಸರು ನಾಮಕರಣ ವಿಚಾರವಾಗಿ ಮಾತನಾಡಿದ ಅವರು, ಒಡೆಯರ್ ಈ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ಒಡೆಯರ್ ಅವರು ಅಭಿವೃದ್ದಿ ಹರಿಕಾರರು, ಸಕ್ಕರೆ ಕಾರ್ಖಾನೆಗಳನ್ನು ತಂದವರು ಒಡೆಯರ್, ಟಿಪ್ಪು ಹೆಸರೇ ಗೊಂದಲದಲ್ಲಿದೆ, ಚರ್ಚೆಯಲ್ಲಿದೆ, ಹೀಗಾಗಿ ಒಡೆಯರ್ ಹೆಸರು ಇಟ್ಟಿರುವುದು ಸರಿಯಿದೆ ಎಂದು ಹೇಳಿದರು.

ಈಶ್ವರಪ್ಪ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಿನ್ನೆ ನಮ್ಮ ಜೊತೆಗೆ ಇದ್ದರು, ಅವರಿಗೆ ಅಸಮಾಧಾನ ಇಲ್ಲ. ಇವತ್ತು ಬೆಳಿಗ್ಗೆ ಅಸಮಾಧಾನ ಆಗಿದ್ದಾರೆ ಎಂದರೆ ನಂಬಲ್ಲ. ಸಂಪುಟ ವಿಸ್ತರಣೆ ಬೇಡಿಕೆ ಇದೆ. ಅಸಮಧಾನ ಏನೂ ಇಲ್ಲ. ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟಿದ್ದು. ಅವಧಿ ಮುಂಚೆ ಚುನಾವಣೆ ಆಗಲ್ಲ, ಮತ್ತೆ ಗೆದ್ದು ಅಧಿಕಾರಕ್ಕೆ ನಾವೇ ಬರುತ್ತೇವೆ ಎಂದರು.

RELATED ARTICLES

Related Articles

TRENDING ARTICLES