ಬೆಳಗಾವಿ: ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ ಹಿನ್ನೆಲೆ ಧಾರವಾಡ ಗ್ರಾಮೀಣ ಮಾಜಿ ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಭಾವುಕರಾದ ಪ್ರಸಂಗ ಇಂದು ನಡೆಯಿತು.
ಜಿಲ್ಲೆಯಲ್ಲಿಂದು ಧಾರವಾಡ ಪ್ರವೇಶಕ್ಕೆ ನಿರ್ಬಂಧಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಒಬ್ಬ ರಾಜಕಾರಣಿ ಎನ್ನೊದಕ್ಕಿಂತ ನಾನೊಬ್ಬ ರೈತನಾಗಿದ್ದೇನೆ. ನನ್ನ ಪಾರ್ಮ್ ಹೌಸ್ನಲ್ಲಿ ಐದು ಸಾವಿರ ಜಾನುವಾರುಗಳಿವೆ. ನನ್ನ ಮಕ್ಕಳಗಿಂತ ಹೆಚ್ಚಾಗಿ ಅವುಗಳನ್ನು ಸಾಕುತ್ತಿದ್ದೆ, ಆದರೆ ಈಗ ನನಗೆ ನಿರ್ಬಂಧ ಹೇರಲಾಗಿದೆ.
ಪ್ರತಿ ದಿನ ನಾನು ಬೆಳಗ್ಗೆ ಐದು ಗಂಟೆಗೆ ಪಾರ್ಮ್ ಹೌಸ್ಗೆ ಹೋಗುತ್ತಿದ್ದೆ, ಬೆಂಗಳೂರಿಗೆ ಹೋದಾಗ ಮಾತ್ರ ಹೋಗುತ್ತಿರಲಿಲ್ಲ. ಕ್ಷೇತ್ರದಲ್ಲಿ ಇದ್ದಾಗ ಮಾತ್ರ ಪಾರ್ಮ್ ಗೆ ಹೋಗದೆ ಇರುತ್ತಿಲ್ಲ. ಇಷ್ಟು ದಿನ ಹೋಗದೆ ಇರುವುದು ತುಂಬಾ ನನಗೆ ನೋವು ತಂದಿದೆ. ನಾನೇನು ಉಗ್ರಗಾಮಿನೇ ರಾಜ್ಯ ಮತ್ತು ಜಿಲ್ಲೆಯಿಂದ ಬಹಿಸ್ಕಾರ ಹಾಕೋಕೆ ಎಂದು ವಿನಯ್ ಕುಲಕರ್ಣಿ ಕಿಡಿಕಾರಿದರು.
ಜಾನುವಾರುಗಳನ್ನು ಈಗ ನನ್ನ 22 ವರ್ಷದ ಮಗಳು ನೋಡಿಕೊಳ್ಳುತ್ತಿದ್ದಾಳೆ. ಎರಡು ಮೂರುವ ಹಸುಗಳನ್ನು ಕಟ್ಟಿದ ರೈತರೆ ಒಂದು ದಿನ ಮನೆ ಬಿಟ್ಟು ಹೋಗಲು ಹಿಂದೇಟು ಹಾಕುತ್ತಾರೆ. ಅಂತದ್ರಲ್ಲಿ ಸಾವಿರಾರು ಹಸುಗಳನ್ನು ಕಟ್ಟಿದ ನಾನು ಮನೆಗೆ ಹೋಗದಿದ್ರೆ ಮುಖಪ್ರಾಣಿಗಳ ಕಥೆ ಏನು ಎಂದು ತಮ್ಮನ್ನ ಧಾರವಾಡ ಜಿಲ್ಲೆಗೆ ನಿರ್ಬಂಧಿಸಿದ್ದಕ್ಕೆ ಭಾವುಕರಾದರು.
ನಾನು ಈ ದೇಶದ ಕಾನೂನಿಗೆ ಗೌರವಿಸುತ್ತೇನೆ. ಕಾನೂನು ಹೋರಾಟ ಮುಂದು ಹೊರೆಸಿದ್ದೇನೆ. ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುತ್ತಾರೆ ಅನ್ನುವ ವಿಶ್ವಾಸವಿದೆ. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟನೆ ನೀಡಿದರು.
ಇನ್ನು ಧಾರವಾಡ ಜಿಲ್ಲೆಗೆ ವಿನಯ್ ಕುಲಕರ್ಣಿ ಕ್ಷೇತ್ರ ಬದಲಿಸುವ ವಿಚಾರವಾಗಿ ಕ್ಷೇತ್ರ ಬಲಲುಸುವ ಪ್ತಶ್ನೆಯೇ ಇಲ್ಲ. ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ತಮ್ಮ ಕ್ಷೇತ್ರದಲ್ಲಿ ಎದ್ದಿರತಕ್ಕಂತ ಪ್ರಶ್ನೆಗೆ ವಿನಯ್ ಕುಲಕರ್ಣಿ ಉತ್ತರಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗಿಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ ಅವರು ಜೈಲು ಕಂಡಿದ್ದರು. ಸದ್ಯ ಷರತ್ತು ಬದ್ಧ ಜಾಮೀನಿನ ಮೇಲೆ ವಿನಯ್ ಕೆಲವು ತಿಂಗಳ ಹಿಂದೆ ಹೊರಬಂದಿದ್ದಾರೆ. ಆದರೆ, ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ.