ಬೆಂಗಳೂರು: ಬಿಡಬ್ಲೂಎಸ್ಎಸ್ಬಿ ಇಲಾಖೆಯಲ್ಲಿ ಕೆಲಸ ಕೊಡಿಸೋದಾಗಿ ವಂಚನೆ ಪ್ರಕರಣ ಬಗ್ಗೆ ಪವರ್ ಟಿವಿ ಸ್ಟಿಂಗ್ ಆಪರೇಷನ್‌ನನ್ನೇ ಪೊಲೀಸರು ಬಂಡವಾಳ ಮಾಡಿಕೊಂಡು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪ್ರಕಾಶ್ ಎನ್ನುವ ವ್ಯಕ್ತಿ ಬಿಡಬ್ಲೂಎಸ್ಎಸ್ಬಿ ಇಲಾಖೆಯಲ್ಲಿ ಕೆಲಸ ಕೊಡಿಸೋದಾಗಿ ವಂಚನೆ ಮಾಡುತ್ತಿದ್ದ, ಈ ಬಗ್ಗೆ ಸವಿಸ್ತಾರವಾಗಿ ಪವರ್ ಟಿವಿ ವರದಿ ಮಾಡಿತ್ತು. ಬಳಿಕ ಆರೋಪಿ ಪ್ರಕಾಶ್ ಚಿಕ್ಕಜಾಲ ಪೊಲೀಸರು ಬಂದಿಸಿದ್ದರು. ಸ್ವಲ್ಪದಿನಗಳ ನಂತರ ಜಾಮೀನಿನ ಮೇಲೆ ಆರೋಪಿ ಹೊರಬಂದಿದ್ದ.
ಇದನ್ನೆ ಬಂಡವಾಳವಾಗಿ ಮಾಡಿಕೊಂಡ ಚಿಕ್ಕಜಾಲ ಪೊಲೀಸರು, ಪ್ರಕಾಶ್ ಹತ್ತಿರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ, ಈ ಕೇಸ್ನಲ್ಲಿ ಆರೋಪಿ ಪ್ರಕಾಶ್ ಮಾವ, ಅಕ್ಕನನ್ನ ಆರೋಪಿ ಮಾಡುವುದಾಗಿ ಪೊಲೀಸರು ಬೆದರಿಕೆ ಹಾಕಿದ್ದಾರೆ.
ದಿನಂಪ್ರತಿ ಪೊಲೀಸ್ರ ಬೆದರಿಕೆಗೆ ಬೇಸತ್ತ ಆರೋಪಿ ಪ್ರಕಾಶ್, ಲೋಕಾಯುಕ್ತಕ್ಕೆ ಬೆಂಗಳೂರಿನ ಚಿಕ್ಕಜಾಲ ಠಾಣೆ ಹೆಡ್ ಕಾನ್ಸ್‌ಟೇಬಲ್ ರವಿ, ಇನ್ಸ್‌ಪೆಕ್ಟರ್ ಪ್ರವೀಣ್ ವಿರುದ್ಧ ದೂರು ನೀಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾನೆ. ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗುತ್ತಿದ್ದಂತೆ ಹೆಡ್ ಕಾನ್ಸ್‌ಟೇಬಲ್ ರವಿ ಬಂಧನವಾಗಿದ್ದರೆ, ಇನ್ಸ್‌ಪೆಕ್ಟರ್ ಪ್ರವೀಣ್ ಪರಾರಿಯಾಗಿ ತಲೆಮರೆಸಿಕೊಂಡಿದ್ದಾರೆ.
ಏನೆ ಆಗಲಿ ನೊಂದವರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರು ಎಂಜಲು ಕಾಸಿಗಾಗಿ ಕೈವೊಡ್ಡಿರುವುದು ಅದೆಷ್ಟು ಸರಿ, ಇನ್ನಾದ್ರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಇಂತಹ ಭ್ರಷ್ಟ ಪೊಲೀಸರನ್ನ ಸದೆಬಡೆಯುತ್ತಾ ಇಲ್ವಾ, ಇದೇ ಠಾಣೆಯಲ್ಲಿ ಮುಂದುವರೆಸಿ ಮತ್ತಷ್ಟು ಭ್ರಷ್ಟಾಚಾರ ಮುಂದುವರೆಸುತ್ತಾ ಕಾದುನೋಡಬೇಕಿದೆ.