Thursday, December 19, 2024

ಪಾಕಿಸ್ತಾನ ವಿರುದ್ಧ ಸೋಲು ಅನುಭವಿಸಿದ ಭಾರತ ವನಿತೆಯರ ತಂಡ.!

ನವದೆಹಲಿ: ಭಾರೀ ಕೂತುಹಳ ಕೆರಳಿಸಿದ್ದ ಮಹಿಳಾ ಏಷ್ಯಾ ಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಮಹಿಳಾ ಕ್ರಿಕೆಟ್​ ತಂಡ 13 ರನ್​ಗಳಿಂದ ಪರಾಭವಗೊಂಡಿದೆ.

6 ವರ್ಷಗಳ ಬಳಿಕ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ಭಾರತ ಕ್ರಿಕೆಟ್​ ಮಹಿಳಾ ತಂಡ ಸೋಲು ಕಂಡಿದೆ. ಪಾಕಿಸ್ತಾನ ಮಹಿಳಾ ತಂಡದ ಪರ ನಿದಾ ದಾರ್ ಅರ್ಧಶತಕ ಮತ್ತು ಎರಡು ವಿಕೆಟ್‌ಗಳನ್ನು ಪಡೆದು ಭಾರತಕ್ಕೆ ಸೋಲಿನ ಕಹಿ ಕಾಣಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಮಹಿಳಾ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 137 ರನ್​ಗಳಿಸಿತ್ತು. ಈ ಗುರಿ ಬೆನ್ನತ್ತಿದ ಭಾರತ ವನಿತೆಯರ ತಂಡ 19.4 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 124 ರನ್​ ಕಲೆಹಾಕುವಲ್ಲಿ ಸಶಕ್ತವಾಯಿತು. ಈ ಮೂಲಕ ಭಾರತ 13 ರನ್​ಗಳಿಂದ ಸೋಲು ಅನುಭವಿಸಿತು.

ಈ ಸೋಲಿನ ಹೊರತಾಗಿಯೂ ಭಾರತ ಮಹಿಳಾ ತಂಡ ಏಷ್ಯಾ ಕಪ್​ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದೆ. ಆಡಿರುವ ನಾಲ್ಕು ಪಂದ್ಯಗಳ ಪೈಕಿ ಭಾರತ ತಂಡ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

 

RELATED ARTICLES

Related Articles

TRENDING ARTICLES