Thursday, December 19, 2024

ಟಿಪ್ಪು ಎಕ್ಸ್​ಪ್ರೆಸ್​​ ಹೆಸರು ಬದಲಾವಣೆಗೆ ಸಿದ್ದರಾಮಯ್ಯ ಕಿಡಿ

ಮಂಡ್ಯ; ಟಿಪ್ಪು ಎಕ್ಸ್​ಪ್ರೆಸ್​​ ಬದಲಿಗೆ ಒಡೆಯರ್ ಎಕ್ಸ್​ಪ್ರೆಸ್​​ ರೈಲು ಹೆಸರು ಬದಲಾವಣೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.

ಜಿಲ್ಲೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಬರಿ ಧರ್ಮ ರಾಜಕೀಯ ಮಾಡುತ್ತಾರೆ. ಇರುವ ಹೆಸರನ್ನು ಬದಲಾಯಿಸುವ ಅವಶ್ಯಕತೆಯಿರಲಿಲ್ಲ. ಬೇರೆ ರೈಲಿಗೆ ಒಡೆಯರ ಹೆಸರನ್ನು ಇಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.

ಬಿಜೆಪಿಯವರಿಗೆ ಹೆಸರಿಡಲು ಬೇರೆ ರೈಲುಗಳು ಇರಲಿಲ್ವಾ, ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಬರೀ ದ್ವೇಷ ಹುಟ್ಟುಹಾಕುವ ಕೆಲಸ ಮಾಡುತ್ತಾರೆ ಎಂದು ಮಂಡ್ಯದಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.

ಒಡೆಯರ್ ಹೆಸರು ಇಡಲಿ ಪರ್ವಾಗಿಲ್ಲ. ಆದ್ರೆ ಬೇರೆ ರೈಲುಗಳು ಇರ್ಲೇ ಇಲ್ವ, ಯಾವಾಗಲೂ ಜಾತಿ ಜಾತಿಗಳ ನಡುವೆ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು ಎಂದರು.

RELATED ARTICLES

Related Articles

TRENDING ARTICLES