ಕಲಬುರಗಿ : ಮದರಸಾದಲ್ಲಿರುವ ಅರಳಿ ಮರ ಮತ್ತು ಲಕ್ಷ್ಮಿಗೆ ಪೂಜೆ ಸಲ್ಲಿಸೋದು ವಾಡಿಕೆ ಎಂದು ಕಲಬುರಗಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದರಸಾದಲ್ಲಿರುವ ಅರಳಿ ಮರ ಮತ್ತು ಲಕ್ಷ್ಮಿಗೆ ಪೂಜೆ ಸಲ್ಲಿಸೋದು ವಾಡಿಕೆ. ಪ್ರತಿ ವರ್ಷವೂ ಇದನ್ನು ಪೂಜೆ ಮಾಡಿಕೊಂಡು ಬರ್ತಿದ್ದಾರೆ. ಹಿಂದೂಗಳನ್ನು ಮಸೀದಿ ಒಳಗೆ ಬಿಡರಬಾರದು ಅಂತ ವಿರೋಧ ವ್ಯಕ್ತಪಡಿಸಿದ್ದಾರೆ. ಗವಾನ್ ಯೂನಿವರ್ಸಿಟಿ ಯಾವುದೇ ಧರ್ಮಕ್ಕೆ ಸೀಮಿತವಾಗಿದ್ದಲ್ಲ ಎಂದರು.
ಇನ್ನು, ಸರ್ಕಾರ, ಪುರಾತತ್ವ ಇಲಾಖೆ ಅಧೀನಕ್ಕೆ ಒಳಪಟ್ಟ ವಿಶ್ವವಿದ್ಯಾಲಯ, ಈ ವಿವಿಗೆ ಎಲ್ಲರೂ ಮುಕ್ತವಾಗಿ ಒಳಪ್ರವೇಶಿಸಲು ಅನುಮತಿ ಇದೆ. ಮುಸ್ಲಿಮರು ನಮಾಜ್ ಜೊತೆಗೆ ಮದರಸಾಗಳಲ್ಲಿ ಶಿಕ್ಷಣ ಕೊಡ್ತಿದ್ದಾರೆ. ಮುಸ್ಲಿಂ ಮುಖಂಡರ ವರ್ತನೆಗೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.