Sunday, November 24, 2024

ದಾಖಲೆ 10 ಕೋಟಿ ಮೊತ್ತಕ್ಕೆ ‘ತೋತಾಪುರಿ’ ಟಿವಿ ರೈಟ್ಸ್

ತೋತಾಪುರಿ ಚಾಪ್ಟರ್ ಒಂದರ ಫಸಲು ಭರ್ಜರಿಯಾಗಿ ಬಂದು, ಸ್ವಾದ ಕೂಡ ಬಹಳ ಜೋರಾಗೇ ಹಬ್ಬಿದೆ. ರುಚಿ ಸವಿದ ಪ್ರತಿಯೊಬ್ಬ ಸಿನಿಪ್ರಿಯ ಕೂಡ ಶಹಬ್ಬಾಸ್ ಅಂತಿದ್ದಾನೆ. ಹೌಸ್​ಫುಲ್ ಫ್ಯಾಮಿಲಿ ಎಂಟರ್​ಟೈನರ್ ಸಕ್ಸಸ್​ ಖುಷಿಯನ್ನ ನವರಸನಾಯಕ ಜಗ್ಗೇಶ್ ಮತ್ತು ತಂಡ ಮಾಧ್ಯಮಗಳ ಮುಂದೆ ಹಂಚಿಕೊಳ್ತು. ಅದೇ ಸಂದರ್ಭದಲ್ಲಿ ಕನ್ನಡಿಗರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಜಗ್ಗಣ್ಣ, ನಿಜಕ್ಕೂ ನಾಚಿಕ ಆಗ್ಬೇಕು ಎಂದ್ರು. ಯಾಕೆ ಅನ್ನೋದಕ್ಕೆ ಈ ಸ್ಟೋರಿ ಓದಿ.

  • ರಾಯರ ಸಾತ್ವಿಕ ಭಕ್ತ  ಕನ್ನಡಿಗರ ಮೇಲೆ ಅಸಮಾಧಾನ

ತೋತಾಪುರಿ ಅನ್ನೋದು ಡೈರೆಕ್ಟರ್ ವಿಜಯ್ ಪ್ರಸಾದ್ ಕೊಟ್ಟ ಮಹಾಪ್ರಸಾದ ಅನ್ನುವಂತಾಗಿದೆ. ಕಾರಣ ಇಲ್ಲಿ ಇಂಟರ್​ಟೈನ್ಮೆಂಟ್ ಜೊತೆ ಎಜುಕೇಷನ್ ಕೂಡ ಇದೆ. ಸಿನಿಮಾದ ಉದ್ದೇಶ ಬರೀ ಮನರಂಜನೆ ಅಷ್ಟೇ ಅಲ್ಲ, ನೋಡುಗರ ಮನ ಮುಟ್ಟುವಂತಹ ವಿಚಾರಗಳನ್ನು ಸಾರುವುದು ಅನ್ನೋದನ್ನ ಈ ಸಿನಿಮಾ ತೋರಿಸಿಕೊಟ್ಟಿದೆ. ಅದ್ರಲ್ಲೂ ಸಂವಿಧಾನ ಅನ್ನೋ ಬೃಹತ್ ಕೊಡೆಯ ಅಡಿಯಲ್ಲಿ ಬದುಕೋ ನಾವು, ಜಾತಿ & ಧರ್ಮದ ಎಲ್ಲೆಗಳನ್ನ ಬಿಟ್ಟು ಅನ್ಯೋನ್ಯವಾಗಿ ಬದುಕು ಸಾಗಿಸಬೇಕು ಅನ್ನೋದು ಇದ್ರ ಪರಮ ಉದ್ದೇಶವಾಗಿದೆ.

ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟಿರೋ ತೋತಾಪುರಿ ಚಾಪ್ಟರ್-1, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದು, ಹೌಸ್​​ಫುಲ್ ಫ್ಯಾಮಿಲಿ ಸಿನಿಮಾ ಆಗಿ ನಾಗಾಲೋಟ ಮುಂದುವರೆಸಿದೆ. ಇನ್ನು ಈ ಚಿತ್ರದ ಸಕ್ಸಸ್​ಮೀಟ್​ನ ರೇಣುಕಾಂಬ ಥಿಯೇಟರ್​ನಲ್ಲಿ ಜಗ್ಗೇಶ್, ಹೇಮಾ ದತ್ ಜೊತೆಗೂಡಿ ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ನಿರ್ಮಾಪಕ ಕೆಎ ಸುರೇಶ್ ಹಮ್ಮಿಕೊಂಡಿದ್ರು.

ನಾನೊಬ್ಬ ರಾಯರ ಸಾತ್ವಿಕ ಭಕ್ತ. ನನಗೆ ರಾಯರಿಗಿಂತ ಏನೂ ಹೆಚ್ಚಲ್ಲ. ಅಂಥದ್ದು ಸಿನಿಮಾ ಬಗ್ಗೆ ಕೆಟ್ಟದಾಗಿ ರಿವ್ಯೂ ಮಾಡಿರೋರ ಮೇಲೆ ಕಿಡಿಕಾರಿದ್ರು. ಅಷ್ಟೇ ಅಲ್ಲ, ಕನ್ನಡಿಗರಿಗೆ ನಾಚಿಕೆ ಆಗ್ಬೇಕು. ಪಕ್ಕದ ತಮಿಳು ಸಿನಿಮಾಗೆ ರಜನಿಕಾಂತ್ ಅಂತಹ ದೊಡ್ಡ ಸ್ಟಾರ್​ ಸಾಥ್ ನೀಡಿದ್ರು. ಯಶಸ್ವಿ ಆಗಿ ಸಾಗ್ತಿದೆ. ನಮ್ಮಲ್ಲಿ ಅದಿಲ್ಲ. ಒಬ್ಬರಿಗೊಬ್ಬರು ಕೈಜೋಡಿಸಬೇಕಲ್ಲವೇ ಅಂತ ಅಸಮಾಧಾನ ವ್ಯಕ್ತಪಡಿಸಿದ್ರು.

ನಾನು ಯಾವ ಸೂಪರ್ ಸ್ಟಾರ್ ಮಗ ಅಲ್ಲ. ನನ್ನ ಹಿಂದೆ ಯಾವ ದೊಡ್ಡ ಪ್ರೊಡಕ್ಷನ್ ಹೌಸ್ ಇಲ್ಲ. ನಾನೊಬ್ಬ ಸಾಮಾನ್ಯ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದೆ ಎಂದ ಜಗ್ಗೇಶ್, ಈ ಸಿನಿಮಾ 10 ಕೋಟಿ ಮೊತ್ತಕಲ್ಕೆ ಒಟಿಟಿ ರೈಟ್ಸ್ ಸೋಲ್ಡ್ ಔಟ್ ಆಗಿದೆ ಅಂತ ಖುಷಿ ವ್ಯಕ್ತಪಡಿಸಿದ್ರು.

ಅಲ್ಲದೆ, ಹಣಕ್ಕೆ ಮಾರು ಹೋದ ತಂಡವೊಂದು 25 ಲಕ್ಷ ಮೊತ್ತ ನಿರೀಕ್ಷಿಸಿತು. ಅಂತವ್ರಿಂದ ಮಾಧ್ಯಮ ಎಚ್ಚೆತ್ತುಕೊಳ್ಳಬೇಕು. ನಮಗೆ ನೀವು ಸಾಕು ಅಂತ ಮಾಧ್ಯಮಗಳಿಗೆ ಹಾಗೂ ಕನ್ನಡ ಕಲಾಭಿಮಾನಿಗಳಿಗೆ ಶಿರಸಾಂಗ ನಮಸ್ಕಾರ ಹಾಕಿದ್ರು ನವರಸನಾಯಕ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES