ಬೆಂಗಳೂರು: ಮುಂದೆ ಬರುವ ವಿಧಾನಸಭೆ 2023 ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಕ್ಕೂ ಹೆಚ್ಚು ಸೀಟು ಬಿಜೆಪಿ ಗೆಲುವು ಸಾಧಿಸಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪ್ರಧಾನಿ ನರೇದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ನಿಶ್ಚಿತವಾಗಿ ಗುರಿಯನ್ನು ತಲುಪಿ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ. ಯಾವುದೇ ಶಕ್ತಿ ಕೂಡ ನಾವು ಅಧಿಕಾರಕ್ಕೆ ಬರೋದನ್ನ ತಡೆಲು ಸಾಧ್ಯವಿಲ್ಲ ಅಂತ ನಾವೆಲ್ಲ ಮನವರಿಕೆ ಮಾಡಿಕೊಡಬೇಕಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಅವರ ಕಾರ್ಯಕ್ರಮ, ಕೆಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಕಳೆದ ಮೂರು ವರ್ಷದಲ್ಲಿ ಕೊಟ್ಟ ಯೋಜನೆಯನ್ನ ಕಾರ್ಯಕರ್ತರು ಅರ್ಥ ಮಾಡಿಕೊಂಡು ಮನೆ ಮನೆಗೆ ತಲುಪಿಸಲು ಕೆಲಸ ಮಾಡಬೇಕು. ತಾವು ಕೇಂದ್ರ ಹಾಗೂ ರಾಜ್ಯದ ಯೋಜನೆ ಅರ್ಥ ಮಾಡಿಕೊಂಡು ಜನರಿಗೆ ತಲುಪಿಸೋ ಕೆಲಸ ಮಾಡಬೇಕಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆ ರೂಪಿಸೋ ಮೂಲಕ ಸುಧಾರಣೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ.
ರಾಜ್ಯದ ಮೂಲೆ ಮೂಲೆಗಳಲ್ಲಿ ಅನೇಕ ವರ್ಷದಲ್ಲಿ ಮನೆಗಳಿಗೆ ವಿದ್ಯುತ್ ಇರಲಿಲ್ಲ. ಅಲ್ಲಿ ವಿದ್ಯುತ್ ಕೊಡುವ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಜನರ ಮನೆ ತಲುಪಿದ್ದೇವೆ. ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ಯೋಜನೆ ಮೂಲಕ ಕೋಟ್ಯಾಂತರ ರೈತರಿಗೆ ನೆರವಾಗಿದ್ದೇವೆ. ಯಾವುದೇ ಯೋಜನೆ ಪಡೆಯಲು ಸುತ್ತಬೇಕಿತ್ತು. ಮೋದಿ ಸೂಚನೆ ಮೇರೆಗೆ ಮನೆಗೆ ತಲುಪಿಸೋ ಕೆಲಸ ಮಾಡಲಾಗಿದೆ. ಯಾವುದೇ ಮಧ್ಯವರ್ತಿಗಳ ಪಾಲಿಗೆ ಹೋಗದಂತೆ ತಡೆದಿದ್ದೇವೆ. ಪಡಿತರವನ್ನ ಪ್ರತಿ ಮನೆಗೆ ತಲುಪಿಸಿದ್ದೇವೆ ಎಂದು ತಮ್ಮ ಸರ್ಕಾರಗಳನ್ನ ಯೋಜನೆಗಳನ್ನ ಯಡಿಯೂರಪ್ಪ ಸಮರ್ಥಿಸಿಕೊಂಡರು.
ರಾಜ್ಯದ ನೀರಾವರಿ ಯೋಜನೆಗೆ ಹೆಚ್ಚಿನ ಆಧ್ಯತೆ ನಮ್ಮ ಸರ್ಕಾರ ನೀಡಿದೆ. ಕೃಷ್ಣಾ ಮೇಲ್ಡಂಡೆ, ಮಹದಾಯಿ, ಮೇಕೆದಾಟು ಯೋಜನೆಗೆ ಹಣ ನೀಡಿದ್ದೇವೆ. ಈಗಾಗಲೇ ಸಿಎಂ ರೈತ ವಿದ್ಯಾನಿಧಿ, ಹತ್ತು ಲಕ್ಷ ವಿದ್ಯಾರ್ಥಿಗಳಿಗೆ 400 ಕೋಟಿ ರೂ ನೀಡಲಾಗಿದೆ. ಮೀನುಗಾರರು, ಆಟೋ ಚಾಲಕರ ಮಕ್ಕಳಿಗೆ ವಿಸ್ತರಣೆ ಮಾಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಮೊದಲ ಬಾರಿ ಅನುಷ್ಠಾನಕ್ಕೆ ತಂದ ರಾಜ್ಯ ಕರ್ನಾಟಕವಾಗಿ ಎಂದು ಯಡಿಯೂರಪ್ಪ ತಮ್ಮ ಪಕ್ಷ ಸರ್ಕಾರದ ಸಾಧನೆಗಳನ್ನ ಜನರಿಗೆ ಮುಟ್ಟಿಸುಂತೆ ಕಾರ್ಯಕರ್ತರಿಗೆ ಹೇಳಿದರು.