ಬೆಂಗಳೂರು : ಸಿಎಂ, ರಾಷ್ಟ್ರಾಧ್ಯಕ್ಷ ಸೇರಿದಂತೆ ಪ್ರಮುಖ ಹುದ್ದೆಗೆ ದಲಿತರ ಪರಿಗಣನೆ ಮಾಡ್ತೀರಾ ಅನ್ನೋ ಪ್ರಶ್ನೆಗೆ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಸರ ಸಂಘಚಾಲಕ ಹುದ್ದೆ ಯಾವುದೇ ಅಧಿಕಾರದ ಹುದ್ದೆ ಅಲ್ಲ. ತ್ಯಾಗ ಸಮರ್ಪಣೆ ಮನೋಭಾವನೆ ಇರೋ ಕಾರ್ಯಕರ್ತರ ಪೈಕಿ ಯಾರ ಬೇಕಾದರೂ ಸಂಘಚಾಲಕ ಆಗಬಹುದು. ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ ಎಂದಿದ್ದಾರೆ.
ಹಿಂದೆ ಬಿಜೆಪಿಯನ್ನು ಭಟ್ರು – ಶೆಟ್ರ ಪಕ್ಷ ಅಂತಿದ್ರು. ಒಕ್ಕಲಿಗರು ಅಲ್ಲಿ ಹೋಗಿ ಎನ್ ಮಾಡ್ತೀರಿ ಅಂತಿದ್ರು. ಆದರೆ ಈಗ ಅಧಿಕಾರ ಯಾರ್ಯಾರಿಗೆ ಸಿಕ್ಕಿದೆ. ನಾವು ಜಾತಿ ನೋಡಿ ಅಧಿಕಾರ ನೀಡಲ್ಲ. ಪ್ರಮುಖ ಹುದ್ದೆಗಳು ಜಾತಿ ನೋಡಿ ನಿರ್ಧಾರ ಆಗಲ್ಲ ಎಂದು ಪರೋಕ್ಷವಾಗಿ ದಲಿತ ಸಿಎಂ ಪ್ರಸ್ತಾಪ ತಳ್ಳಿಹಾಕಿದ್ದಾರೆ. ಇನ್ನೂ ಸರ್ಕಾರದ ಮೇಲೆ ವಿವಿಧ ಆರೋಪಗಳ ವಿಚಾರವಾಗಿ ಮಾತನಾಡಿದ ಅವರು, ಟೂಲ್ ಕಿಟ್ಟನ್ನ ರಾಜ್ಯ, ರಾಷ್ಟ್ರಮಟ್ಟದಲ್ಲೂ ಮಾಡಿದ್ದಾರೆ.
ಇನ್ನು, ಲೋಕಾಯುಕ್ತಕ್ಕೆ ಹಲ್ಲು ಕಿತ್ತು, ಎಸಿಬಿ ರಚನೆ ಮಾಡಿದ್ರು. ಈಗ ಲೋಕಾಯುಕ್ತ ಬಾಗಿಲು ತೆರೆದಿದೆ. ಸಿದ್ದರಾಮಯ್ಯ ಆಗಿರಬಹುದು, ಕಂಟ್ರಾಕ್ಟರ್‌ಗಳ ಬೇರೆ ಯಾರೇ ಆಗಿದ್ರೂ ಕೂಡ ದೂರು ನೀಡಬಹುದು. 40% ಆಗಿರಬಹುದು, ಯಾವುದೇ ವಿಚಾರದ ದಾಖಲೆ ಇದ್ರೆ ದೂರು ಕೊಡಬಹುದು ಎಂದರು.