ಬ್ಯಾಂಕಾಂಕ್: ಥೈಲ್ಯಾಂಡ್ನಲ್ಲಿ ಮಾಜಿ ಪೊಲೀಸ್ ಅಧಿಕಾರಿ ಸಾಮೂಹಿಕ ಗುಂಡಿನ ದಾಳಿ ನಡೆಸಿ 34 ಜನರನ್ನ ಹತ್ಯೆಗೈದ ಘಟನೆ ಇಂದು ನಡೆದಿದೆ ಎಂದು ವರದಿಗಳು ತಿಳಿಸಿವೆ.
ಸಾಮೂಹಿಕ ಗುಂಡಿನ ದಾಳಿಯಲ್ಲಿ 22 ಮಕ್ಕಳು ಹಾಗೂ ವಯಸ್ಕರು ಸೇರಿದಂತೆ ಒಟ್ಟು 34 ಜನರು ಸಾವಿಗೀಡಾಗಿದ್ದು, ಹಲವು ಗಂಭೀರ ಗಾಯಗೊಂಡಿದ್ದಾರೆ. ನಂತರ ಬಂದೂಕುಧಾರಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಈಶಾನ್ಯ ಪ್ರಾಂತ್ಯದ ಮಕ್ಕಳ ಡೇ-ಕೇರ್ ಸೆಂಟರ್ನಲ್ಲಿ ಬಂಧೂಕುದಾರಿ ತನ್ನ ಪತ್ನಿ ಹಾಗೂ ಮಗುವನ್ನ ಸಹ ಹತ್ಯೆಗೈದಿದ್ದಾನೆ. ಮಾಜಿ ಪೊಲೀಸ್ ಅಧಿಕಾರಿಯಿಂದ ಪೈಶಾಚಿಕ ಕೃತ್ಯಕ್ಕೆ ಶಿಕ್ಷಕಿ ಮತ್ತು ಮಕ್ಕಳು ಸೇರಿ 34 ಜನರ ಬರ್ಬರ ಹತ್ಯೆ ಮಾಡಿದ್ದಾನೆ. ಗುಂಡಿನ ದಾಳಿಯಲ್ಲಿ ಬಹುತೇಕ ಮಕ್ಕಳೇ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ಕಳವಳ ವ್ಯಕ್ತಪಡಿಸಿವೆ.