ನೇಪಾಳ; ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರದ ಆರೋಪ ಹಿನ್ನಲೆಯಲ್ಲಿ ನೇಪಾಳದ ಮಾಜಿ ಕ್ರಿಕೆಟ್ ನಾಯಕ ಸಂದೀಪ್ ಲಮಿಚಾನೆ ಅವರು ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಆರೋಪಿ ಮಾಜಿ ಕ್ರಿಕೆಟ್ ನಾಯಕ ಸಂದೀಪ್ ಲಮಿಚಾನೆ ಫೇಸ್ಬುಕ್ ಪೋಸ್ಟ್ ಮಾಡಿ, ನೇಪಾಳದ ಕಾನೂನಿಗೆ ನಾನು ಬದ್ಧನಾಗಿದ್ದೇನೆ. ನಾನು ಕತಾರ್ ಏರ್‌ವೇಸ್‌ನಿಂದ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಗೆ ಇಳಿಯುತ್ತಿದ್ದೇನೆ ಎಂದು ತಿಳಿಸಿದ್ದರು.
25 ವರ್ಷದ ಲಮಿಚಾನೆ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ನೇಪಾಳ ತಂಡವನ್ನ ಮುನ್ನಡೆಸಿದ್ದರು. ನಾನು ಯಾವುದೇ ತಪ್ಪು ಮಾಡಿಲ್ಲ. ಕಾನೂನು ಪ್ರಕಾರ ನನ್ನ ಮೇಲೆ ಬಂದ ಆರೋಪಗಳನ್ನ ಎದುರಿಸುತ್ತೇನೆ. ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇನೆ. ನನಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಪ್ರೀತಿಯ ನೇಪಾಳಿಗರೇ ಆರೋಪ ಮುಕ್ತನಾಗಿ ಮರಳಿ ಶೀಘ್ರದಲ್ಲೇ ಕ್ರಿಕೆಟ್ ಮೈದಾನಕ್ಕೆ ಮರಳುತ್ತೇನೆ. ತ್ವರಿತ ವಿಚಾರಣೆಯಾಗಲಿ ಎಂದು0 ನಾನು ಪ್ರಾರ್ಥಿಸುತ್ತೇನೆ. ತನಿಖೆಯ ಎಲ್ಲಾ ಹಂತಗಳಲ್ಲಿ ನಾನು ಸಂಪೂರ್ಣವಾಗಿ ಸಹಕರಿಸುತ್ತೇನೆ. ನಿರಪರಾಧಿ ಎಂದು ಸಾಬೀತುಪಡಿಸಲು ಕಾನೂನು ಹೋರಾಟ ನಡೆಸುತ್ತೇನೆ. ನ್ಯಾಯವು ಜಯಿಸಲಿ ಎಂದಿದ್ದಾರೆ.
ಆಗಸ್ಟ್ 21 ರಂದು ಲಮಿಚಾನೆ ತನ್ನನ್ನು ಕಠ್ಮಂಡು ಮತ್ತು ಭಕ್ತಾಪುರದ ವಿವಿಧ ಸ್ಥಳಗಳಿಗೆ ಕರೆದೊಯ್ದು ಕಠ್ಮಂಡುವಿನ ಸಿನಮಂಗಲದ ಹೋಟೆಲ್‌ಗೆ ಕರೆತಂದು ಅದೇ ರಾತ್ರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 17 ವರ್ಷದ ಬಾಲಕಿಯೊಬ್ಬಳು ಪ್ರಕರಣ ದಾಖಲಿಸಿದ್ದಳು.