ಬೆಂಗಳೂರು: ದಸರಾ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ದೆಹಲಿ ಪ್ರವಾಸ ಸಾಧ್ಯತೆ ಹಿನ್ನೆಲೆಯಲ್ಲಿ ಸಿಎಂ ಅವರನ್ನ ಮಾಜಿ ಸಚಿವ ರಮೇಶ್ ಜಾರಿಕಿಹೊಳಿ ಅವರು ಭೇಟಿಯಾದರು.
ಬೆಂಗಳೂರಿನ ಆರ್ಟಿ ನಗರದ ನಿವಾಸದಲ್ಲಿ ಸಿಎಂ ಅವರನ್ನ ಭೇಟಿಯಾದ ರಮೇಶ್ ಜಾರಕಿಹೊಳಿ ಅವರು ಭೇಟಿಯಾಗಿ ಸಂಪುಟ ರಚನೆ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಲೈಂಗಿಕ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಿಕಿಹೊಳಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿತ್ತು. ಹೀಗಾಗಿ ಆಗ ರಮೇಶ್ ಜಾರಕಿಹೊಳಿ ತಮ್ಮ ಜಲ ಸಂಪನ್ಮೂಲ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಲೈಂಗಿಕ ಸಿಡಿ ಬಗ್ಗೆ ರಮೇಶ್ ಜಾರಿಕಿಹೊಳಿಗೆ ಅವರಿಗೆ ಇತ್ತೀಚಿಗೆ ಕ್ಲೀನ್ ಚಿಟ್ ಸಿಕ್ಕಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲೆಯಲ್ಲಿ ಈಗ ಮತ್ತೆ ಸಂಪುಟ ಸಚಿವ ಸ್ಥಾನಕ್ಕೆ ಸೇರಲು ರಮೇಶ್ ಕಸರತ್ತು ನಡೆಸಿದ್ದು, ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಸಿಎಂಗೆ ಒತ್ತಡ ಹಾಕಿದ್ದಾರೆ.
ಖಾಲಿ ಇರುವ 7 ಸ್ಥಾನಗಳ ಭರ್ತಿಗೆ ಸಿಎಂ ಬೊಮ್ಮಾಯಿ ಚಿಂತನೆ ತೋರಿದ್ದು, ದಸರಾ ನಂತರ ದೆಹಲಿಗೆ ತೆರಳಿ ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಸಿ ಅಂತಿಮವಾಗಿ ಖಾಲಿ ಇರುವ ಸಂಪುಟ ರಚನೆ ಮಾಡಲಿದ್ದಾರೆ.
ಹೀಗಾಗಿ ದಸರಾ ಬಳಿಕ ದೆಹಲಿ ಗೆ ಹೋಗಲು ಸಿಎಂ ನಿರ್ಧಾರವಾಗುತ್ತಿದ್ದಂತೆ ಸಚಿವ ಸ್ಥಾನಕ್ಕಾಗಿ ಕೆ.ಎಸ್ ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಎಂಪಿ ರೇಣುಕಾಚಾರ್ಯ, ಸುರಪುರ ರಾಜೂಗೌಡ, ಎಸ್ ಎ ರಾಮದಾಸ್, ಅಪ್ಪಚ್ಚು ರಂಜನ್, ಪಿ ರಾಜೀವ್, ಜಿ ಹೆಚ್ ತಿಪ್ಪಾರೆಡ್ಡಿ, ರಾಜಕುಮಾರ್ ಪಾಟೀಲ್, ಕೆ ಪೂರ್ಣಿಮಾ ಶ್ರೀನಿವಾಸ್, ದತ್ತಾತ್ರೇಯ ಪಾಟೀಲ್ ರೇವೂರ, ಎನ್ ಮಹೇಶ್, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ, ಎಂಎಲ್ಸಿ ಆರ್ ರವಿಶಂಕರ್, ಎಂಎಲ್ಸಿ ಲಕ್ಷ್ಮಣ ಸವದಿ ಅವರು ಕಸರತ್ತು ನಡೆಸುತ್ತಿದ್ದಾರೆ.