ದುಬೈ: ದುಬೈನ ಜೆಬೆಲ್ ಅಲಿಯಲ್ಲಿ ನೂತನವಾಗಿ ನಿರ್ಮಿಸಲಾದ ಹಿಂದೂ ದೇವಾಲಯವು ದಸರಾ ಹಬ್ಬಕ್ಕೂ ಒಂದು ದಿನ ಮೊದಲೇ ಬಾಗಿಲು ತೆರೆಯಲಿದೆ ಎಂದು ವರದಿಗಳು ತಿಳಿಸಿವೆ.
ಈ ದೇವಾಲಯವು ಯುಎಇಯ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾದ ಸಿಂಧಿ ಗುರು ದರ್ಬಾರ್ ದೇವಾಲಯವಾಗಿದೆ ಎಂದು ಎಎನ್ಐ ವರದಿ ಮಾಡಿದೆ. ಫೆಬ್ರವರಿ 2020 ಈ ದೇವಾಲಯ ಹೊಸದಾಗಿ ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿತ್ತು. ಈಗ ದಶಕಗಳ ಭಾರತೀಯ ಹಿಂದೂಗಳು ಕನಸನ್ನು ನನಸಾಗುತ್ತಿದೆ.
ಅಕ್ಟೋಬರ್ 5 ದಸರಾ ಹಬ್ಬದ ದಿನ ಸಾರ್ವಜನಿಕರಿಗೆ ಅಧಿಕೃತವಾಗಿ ದೇವಾಲಯ ತೆರೆಯಲಿದೆ. ಈ ಹಿಂದೂಗಳಿಗೆ ಮಾತ್ರವಲ್ಲದೇ ಎಲ್ಲಾ ಎಲ್ಲಾ ಧರ್ಮದ ಜನರನ್ನು ಸ್ವಾಗತಿಸುತ್ತದೆ. 16 ದೇವತೆಗಳು ಮತ್ತು ಇತರ ಒಳಾಂಗಣ ಕೆಲಸಗಳನ್ನು ವೀಕ್ಷಿಸಲು ಆರಾಧಕರು ಮತ್ತು ಇತರ ಸಂದರ್ಶಕರಿಗೆ ಪ್ರವೇಶವನ್ನು ಅನುಮತಿಸಿದೆ ಎಂದು ಅಲ್ಲಿನ ಗಲ್ಫ್ ಸುದ್ದಿ ಸಂಸ್ಥೆ ವರದಿ ಮಾಡಿದೆ.