ಬೆಂಗಳೂರು : ದೇಶಾದ್ಯಂತ PFI ಸೇರಿ ಒಟ್ಟು 14 ಸಂಘಟನೆಗಳು ಬ್ಯಾನ್ ಆಗಿದ್ದಾಯ್ತು. ಈಗಾಗಲೇ ಹಲವು ಪಿಎಫ್ಐ ಮುಖಂಡರನ್ನ ವಶಕ್ಕೆ ಪಡೆದಿರೋ ಪೊಲೀಸರು ವಿಚಾರಣೆಯನ್ನ ಚುರುಕುಗೊಳಿಸಿದ್ದಾರೆ. ಕೆಜೆ ಹಳ್ಳಿ ಪೊಲೀಸರು ಕಸ್ಟಡಿಯಲ್ಲಿರೋ 15 ಪಿಎಫ್ಐ ಮುಖಂಡರು, ಸ್ಪೋಟಕ ಮಾಹಿತಿಗಳನ್ನು ಬಾಯ್ಬಿಡಿಸಿದ್ದಾರೆ. ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ಯಾವ ರೀತಿ ಮಾಡಬೇಕು..? ಸಾರ್ವಜನಿಕರ ಎದುರು ಹೇಗೆ ಮಾತನಾಡಬೇಕು..? ಸಮಾಜದಲ್ಲಿ ಅಂಬೇಡ್ಕರ್, ಸಂವಿಧಾನ, ಸಮಾನತೆ, ದಲಿತರು ಹಾಗೂ ಶೋಷಿತರ ಪರವಾಗಿ ಹೇಗೆ ಮಾತನಾಡಬೇಕು..? ಹೀಗೆ ಹತ್ತಾರು ವಿಚಾರಗಳ ಬಗ್ಗೆ ಯುವಕರಿಗೆ ಟ್ರೈನಿಂಗ್ ಕೊಡುವ ಅಂಶಗಳು ರಿವೀಲ್ ಆಗಿವೆ. ಜೊತೆಗೆ ಟ್ರೈನಿಂಗ್ ಮುಗಿದ ಮೇಲೆ ಸತ್ಯಮಂಗಲ ಕಾಡಿನಲ್ಲೇ ಕ್ರಿಕೆಟ್ ಆಡಿಕೊಂಡು ನಂತರ ಅಲ್ಲೆ ಇದ್ದ ರೆಸಾರ್ಟ್ ನಲ್ಲಿ ಕಾಲ ಕಳೆಯುತ್ತಿದ್ದಾರಂತೆ.
ಪಿಎಫ್ಐ ಮುಖಂಡರಿಗೆ ಕೆ.ಜೆ.ಹಳ್ಳಿ ಪೊಲೀಸರು ಸಿಕ್ಕಾಪಟ್ಟೆ ಗ್ರೀಲ್ ಮಾಡ್ತಾ ಇದ್ದಾರೆ. ಒಬ್ಬೊಬ್ಬ ಆರೋಪಿಯನ್ನೂ ಇಂಟ್ರಗೇಷನ್ ಮಾಡ್ತಿದ್ದಾರೆ. ಜೊತೆಗೆ ಆರೋಪಿಗಳ ಮೊಬೈಲ್ಗಳನ್ನು ರಿಟ್ರೀವ್ ಮಾಡಿರುವ ಪೊಲೀಸರು, ಹಲವು ಸ್ಪೋಟಕ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಕೇರಳ, ಮಂಗಳೂರು ಹಾಗೂ ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಪೊಲೀಸರಿಗೆ ರಿಟ್ರೀವ್ ಆದ ಮೊಬೈಲ್ಗಳಲ್ಲಿ ಪೋಟೋವೊಂದು ಸಿಕ್ಕಿತ್ತು. ಅದೇ ಸತ್ಯಮಂಗಲ ಫಾರೆಸ್ಟ್ ಲಿಂಕ್.
ಆರೋಪಿಗಳ ಮೊಬೈಲ್ ರಿಟ್ರೀವ್ ವೇಳೆ ಪೊಲೀಸರಿಗೆ ಎರಡು ಫೋಟೋ ಪತ್ತೆಯಾಗಿದೆ. ಫೋಟೋ ತೋರಿಸಿ ಆರೋಪಿಗಳಿಗೆ ಪೊಲೀಸರು ಗ್ರಿಲ್ ಮಾಡಿದ್ದಾರೆ. ಈ ವೇಳೆ ಸತ್ಯಮಂಗಲ ಕಾಡಿನ ರಹಸ್ಯವನ್ನ ಕಿರಾತಕರು ಬಿಚ್ಚಿಟ್ಟಿದ್ದಾರೆ. ತಮಿಳುನಾಡಿನ ಸತ್ಯಮಂಗಲ ಕಾಡಿನಲ್ಲಿ ಆರೋಪಿಗಳು ಸಭೆ, ತರಬೇತಿ, ಮುಗಿದ ಬಳಿಕ ಕ್ರಿಕೆಟ್ ಆಡುತ್ತಿದ್ದರು. ರೆಸಾರ್ಟ್ ಒಂದರಲ್ಲಿ ಸಭೆ ನಡೆಸುತ್ತಿದ್ದ PFI ಮುಖಂಡರು, ‘ಕೇಡಾರ್’ ಹೆಸರಿನಲ್ಲಿ ಯುವಕರಿಗೆ ತರಬೇತಿ ನೀಡುತ್ತಿದ್ದರು.
ಇನ್ನು, 15 ಜನ ಆರೋಪಿಗಳನ್ನು 11ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದ ಕೆ.ಜೆ.ಹಳ್ಳಿ ಪೊಲೀಸರು, ಆರೋಪಿಗಳ ವಿರುದ್ಧ uapa ಪ್ರಕರಣ ದಾಖಲಿಸಲು ಮನವಿ ಮಾಡಿದ್ರು. ಪೊಲೀಸರ ಮನವಿ ಪುರಸ್ಕರಿಸಿದ ಕೋರ್ಟ್ NIA ವಿಶೇಷ ಕೋರ್ಟ್ಗೆ ಕೇಸ್ ವರ್ಗಾವಣೆ ಮಾಡಿ ಇದೇ ತಿಂಗಳು 6 ನೇ ತಾರೀಕು ಆರೋಪಿಗಳನ್ನು NIA ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಎಂದು ಆದೇಶ ಹೊರಡಿಸಿದೆ.
ಅಶ್ವತ್ಥ್.ಎಸ್.ಎನ್, ಕ್ರೈಂ ಬ್ಯೂರೋ, ಪವರ್ ಟಿವಿ